Mysore
84
overcast clouds

Social Media

ಭಾನುವಾರ, 14 ಜೂನ್ 2026
Light
Dark

ದಸರಾ ನೆನಪು: ಕವಿತೆ ಓದಲು ದಸರಾಗೆ ಬಂದಿದ್ದೆ

ಕವಿಗೋಷ್ಠಿಯಲ್ಲಿ ಕವಿತೆ ಓದುವುದಕ್ಕೆ ನಮ್ಮ ಅಣ್ಣನ ಜತೆ ಮೈಸೂರು ದಸರಾಕ್ಕೆ ಬಂದಿದ್ದೆ. ಅದು ನನ್ನ ಮೊದಲ ದಸರಾ ನೋಟವಾಗಿತ್ತು. ಆ ಸಂದರ್ಭದಲ್ಲಿ ಜನದಟ್ಟಣೆಯಿಂದ ಯಾವ ಕಡೆ ಹೋಗಬೇಕು ಎಂಬುದೇ ಗೊತ್ತಾಗುತ್ತಿರಲಿಲ್ಲ. ಹಾಗಾಗಿ ದಸರಾ ನೋಡಲು ಸಾಧ್ಯವಾಗಲಿಲ್ಲ.
ಅಂಬಾರಿ ಬರುವ ಸಂದರ್ಭದಲ್ಲಿ ನಮ್ಮ ವಾಹನ ನೋ ಪಾರ್ಕಿಂಗ್‌ನಲ್ಲಿ ಸಿಕ್ಕಿಕೊಂಡು ಚಡಪಡಿಸಿದೆವು. ಅಂಬಾರಿ ನೋಡಲು ಆಗದೇ ಇದ್ದರೂ ಮೈಸೂರಿನ ವೈಭವ ನೋಡಲು ರಮಣೀಯವಾಗಿತ್ತು. ಬರೀ ಚಿತ್ರಗಳಲ್ಲಿ ಅರಮನೆ ನೋಡಿದ್ದ ನಾವು ಮೊದಲ ಬಾರಿಗೆ ರಾತ್ರಿ ಸಮಯದಲ್ಲಿ ಅರಮನೆಯ ವೈಭೋಗವನ್ನು ನೋಡಿದ ಕ್ಷಣ, ತ್ರಿ ಸ್ಟಾರ್ ಹೋಟೆಲ್‌ನಲ್ಲಿ ಊಟ ಸವಿದದ್ದು ಎಂದಿಗೂ ಮರೆಯದ ನೆನಪು.
ಅರಸೊತ್ತಿಗೆ ವ್ಯವಸ್ಥೆಯ ಜತೆಗೆ ವೈಚಾರಿಕ ಸಂಘರ್ಷವು ಮೈಸೂರಿನಲ್ಲಿ ಬೆಳೆದಿದೆ. ಪ್ರಮುಖವಾಗಿ ರೈತರಿಲ್ಲದ ದಸರಾ ಊಹಿಸಿಕೊಳ್ಳಲು ಸಾಧ್ಯವಿಲ್ಲ. ದಸರಾ ಮೈಸೂರಿಗೆ ಸೀಮಿತವಾಗದೇ ಭಿನ್ನ ಸ್ವರೂಪದಲ್ಲಿ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ , ದಕ್ಷಿಣ ಕರ್ನಾಟಕ ಇವುಗಳ ಕಡೆ ನಡೆಸುವ ಅಗತ್ಯವಿದೆ.
ಅರವಿಂದ ಮಾಲಗತ್ತಿ, ನಿವೃತ ಪ್ರಾಧ್ಯಾಪಕರು

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!