Mysore
29
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಮೈಸೂರು ದಸರಾ ಅಂಗವಾಗಿ ವಿ. ಮಿಲ್ ಸಂಸ್ಥೆ ವತಿಯಿಂದ ವಿವಿಧ ಸ್ಪರ್ಧೆಗಳು

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ಗ್ರಾಮೀಣ ಭಾಗದ ಮಹಿಳೆಯರಲ್ಲಿ ಉದ್ಯಮ ಶೀಲತೆಯನ್ನು ಬೆಳೆಸುತ್ತಾ, ಸಾಮಾಜಿಕ ಉದ್ಯಮವಾಗಿ ಗುರುತಿಸಿಕೊಂಡಿರುವ ವಿ ಮಿಲ್ ಸಂಸ್ಥೆಯು ರಾಗಿಯ ಮಹತ್ವ ತಿಳಿಸುವ ಉದ್ದೇಶದಿಂದ ನವಸಿರಿ ಅಭಿಯಾನ ಆರಂಭಿಸಿದ್ದು, ಇದರ ಭಾಗವಾಗಿ ಸೆ.27ರಿಂದ ಹಮ್ಮಿಕೊಳ್ಳಲಿರುವ ನಗರದ ಜೆಕೆ ಮೈದಾನದಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಸಂಸ್ಥೆಯು ಸ್ಟಾಲ್ ಹಾಕುವ ಮೂಲಕ ವಿವಿಧ ಸ್ವರ್ಧೆಗಳನ್ನು ಆಯೋಜಿಸಿದೆ.

ಸ್ಪರ್ಧೆಗಳು : ಸೆ. 26, 27 ನವಕುಂಚ ಸ್ಪರ್ಧೆ, ಸೆ.28 ರಂದು ಬೆಳಿಗ್ಗೆ 11ಕ್ಕೆ ನವರುಚಿ ಸ್ಪರ್ಧೆ, ಸೆ.29 ಮಧ್ಯಾಹ್ನಕ್ಕೆ ನವಸಿರಿಧಾನ್ಯ ಸ್ಪರ್ಧೆ, ಸೆ.26 ರಿಂದ 28ರವರೆಗೆ ನವರಾಗ ಸ್ಪರ್ಧೆ, ಸೆ.26 ರಿಂದ 29ರವರೆಗೆ ನವರಂಗ್, ನವಚಿತ್ರ ಸ್ಪರ್ಧೆ, ನವಕಾವ್ಯ ಸ್ಪರ್ಧೆಗಳನ್ನು ಮತ್ತು ಸೆ.26ರಿಂದ ಸೆ.30ರವರೆಗೆ ನವಶಕ್ತಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪ್ರತೀ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಬಹುಮಾನಗಳು ಇರುತ್ತವೆ.

ಸ್ಪರ್ಧೆ ವಿವರ: ನವರುಚಿ ರಾಗಿ ಮುದ್ದೆ ತಿನ್ನುವುದು. ನವಕಾವ್ಯ ರಾಗಿ ಮತ್ತು ಸಿರಿಧಾನ್ಯದ ಕುರಿತು ಕವಿತೆ ರಚನೆ ಮತ್ತು ವಾಚನ. ನವರಂಗ್ ನವರಾತ್ರಿ ಹಿನ್ನೆಲೆ ಬಣ್ಣದ ಉಡುಗೆ ತೊಟ್ಟು ಪೋಟೋ ಕಳುಹಿಸುವುದು. ನವ ಕುಂಚ
ಮೈಸೂರು ದಸರಾವನ್ನು ಬಿಂಬಿಸಬೇಕು ಪೇಂಟಿಂಗ್ ಮಾಡುವುದು. ನವ ರಾಗ ಶ್ರೀ ಪುರಂದರದಾಸರು ರಚಿಸಿದ ರಾಗಿ ತಂದಿರ ಭಿಕ್ಷಕೆ ರಾಗಿ ತಂದಿರಾ ಹಾಡನ್ನು ಹಾಡಿ ಕಳಿಸಬೇಕು.‌ ನವಸಿರಿಧಾನ್ಯ ಸಿರಿಧಾನ್ಯ ಬಳಸಿ ಅಡುಗೆ ಮಾಡುವುದು. ನವಶಕ್ತಿ ದಸರಾ ಗೊಂಬೆಯ ವಿಡಿಯೋ 2 ನಿಮಿಷದೊಳಗೆ ಇರಬೇಕು.
ಗೊಂಬೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರಬೇಕು.

ವಿಶೇಷ: ಇನ್ನು ಈ ಸ್ಟಾಲ್ ನಲ್ಲಿ ವಿ ಮಿಲ್ ನ 14 ಗ್ರಾಮೀಣ ಭಾಗದ ಮಹಿಳೆಯರು ದೇಸಿ ಆಹಾರ ಉತ್ಪನ್ನಗಳ ಬಗ್ಗೆ ಅಚ್ಚುಕಟ್ಟಾಗಿ ಮಾಹಿತಿ ನೀಡಲಿದ್ದು, ಇಂತಹ ಒಂದು ಉದ್ಯಮದಿಂದ ಆರ್ಥಿಕವಾಗಿ ಪ್ರಗತಿಗೊಂಡ ತಮ್ಮ ಯಶಸ್ಸಿನ ಕಥೆಯನ್ನು ಹಂಚಿಕೊಳ್ಳುವ ಮೂಲಕ ಮತ್ತಷ್ಟು ಮಹಿಳೆಯರಿಗೆ ಪ್ರೇರಣೆಯಾಗಲಿದ್ದಾರೆ. ಮಹಿಳಾ ಮತ್ತು ಮಕ್ಕಳ ದಸರಾ ವೀಕ್ಷಣೆ ಬರುವ ಪ್ರೇಕ್ಷಕರು ಸ್ಟಾಲ್ ಗೆ ಭೇಟಿ ನೀಡಿ ಇಂತಹ ಮಹಿಳೆಯರನ್ನು ಪ್ರೋತ್ಸಾಹಿಸಬೇಕೆಂದು ಮನವಿ ಮಾಡುತ್ತೇವೆ.

ಸೂಚನೆಗಳು: ಸ್ಮರ್ಧೆಯಲ್ಲಿ ಪ್ರವೇಶಕ್ಕಾಗಿ #navasiri ಹ್ಯಾಶ್‌ಟ್ಯಾಗ್ ಜೊತೆಗೆ @wemillindia ಅನ್ನು ಟ್ಯಾಗ್ ಮಾಡುವುದು ಅತ್ಯಗತ್ಯ. ಹೆಚ್ಚಿನ ಮಾಹಿತಿಗಾಗಿ‌ ಸಂಪರ್ಕಿಸಿ: 7337844633.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ