ಹನೂರು: ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತಿ ಮುಖ್ಯವಾಗಿದ್ದು, ಇಂತಹ ಶ್ರೇಷ್ಠ ವೃತ್ತಿಯಲ್ಲಿ ತೊಡಗಿ ನಿವೃತ್ತಿ ಹೊಂದುತ್ತಿರುವ ನಿವೃತ್ತ ಮುಖ್ಯಶಿಕ್ಷಕ ಲಿಂಗರಾಜು ಅವರ ಮುಂದಿನ ವೃತ್ತಿ ಜೀವನ ಶುಭಕರವಾಗಿರಲಿ ಎಂದು ಶಿಕ್ಷಕ ಶಾಂತರಾಜು ತಿಳಿಸಿದರು.

ಪಟ್ಟಣದ ಸರ್ಕಾರಿ ಜಿ.ವಿ. ಗೌಡ ಕಾಲೇಜಿನಲ್ಲಿ ಮುಖ್ಯ ಶಿಕ್ಷಕ ಲಿಂಗರಾಜು ಅವರು ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ವಿದ್ಯಾರ್ಥಿಗಳು ಹಾಗೂ ಸಹ ಶಿಕ್ಷಕರ ಜೊತೆ ಉತ್ತಮ ಒಡನಾಟವನ್ನು ಹೊಂದದ್ದ ಲಿಂಗರಾಜು ಅವರ ಸೇವೆ ಸ್ಮರಣಿಯ ಎಂದರು.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ಮಹಾದೇವ, ಕಛೇರಿ ವ್ಯವಸ್ಥಾಪಕಿ ಸೌಭಾಗ್ಯ, ಚಂದ್ರಶೇಖರ್, ರವೀಂದ್ರ, ಮಧು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





