ಮೈಸೂರು: ದೇಶ-ವಿದೇಶಗಳಲ್ಲಿ ಹೆಸರು ಗಳಿಸಿರುವ ಸಂಗೀತ ವಿದ್ವಾಂಸರು, ಗಾಯಕರು ನಡೆಸಿಕೊಡುವ ಅರಮನೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಾಣ ಕಾರ್ಯ ಆರಂಭವಾಗಿದ್ದು ಅಂಬಾವಿಲಾಸ ಅರಮನೆ ಎದುರು ವಿಶಾಲವಾದ ವೇದಿಕೆ ನಿರ್ಮಿಸಲು ಕಾರ್ಮಿಕರು ಕೆಲಸ ಆರಂಭಿಸಿದ್ದಾರೆ.
೧೦*೨೦ ಅಡಿ ಅಗಲದ ವೇದಿಕೆ ನಿರ್ಮಾಣ ಮಾಡಲಿದ್ದು, ದಸರಾ ಮಹೋತ್ಸವದ ಬ್ಯಾಕ್‌ಡ್ರಾಪ್ ಹೊಂದಿರಲಿದೆ. ಪರ್ಯಾಯವಾಗಿ ಮಳೆ ಬಂದರೆ ಕಾರ್ಯಕ್ರಮ ನಡೆಸಿ ಕೊಡಲು ಅನುಕೂಲವಾಗುವಂತಹ ಮತ್ತೊಂದು ವಾಟರ್ ಪ್ರೂಫ್ ವೇದಿಕೆ ನಿರ್ಮಾಣ ಮಾಡಲಾಗುತ್ತದೆ. ವಿವಿಐಪಿ, ವಿಐಪಿಗಳು, ಅಧಿಕಾರಿಗಳು, ಪ್ರಾಯೋಜಕತ್ವ ಹೊಂದಿ ದವರಿಗೆ ಪ್ರತ್ಯೇಕ ಗ್ಯಾಲರಿ ನಿರ್ಮಾಣ ಮಾಡಲಾಗಿದೆ. ಎರಡರಿಂದ ಮೂರು ಸಾವಿರ ಮಂದಿಯಷ್ಟು ಕುಳಿತು ಕಾರ್ಯಕ್ರಮ ವೀಕ್ಷಿಸಲು ಆಸನದ ವ್ಯವಸ್ಥೆ ಮಾಡಲಾಗುತ್ತದೆ.
ವೇದಿಕೆ ನಿರ್ಮಾಣದ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಬೇಕಾದ ಎಲ್ಲ ಮೆಟಿರಿಯಲ್‌ಗಳನ್ನು ಲಾರಿಯಲ್ಲಿ ತಂದಿಳಿಸಿದ್ದಾರೆ. ಗಣ್ಯರು ಕೂರಲು ಹೊಸ ಆಸನಗಳನ್ನು ಶೇಖರಿಸಿ ಡಲಾಗಿದೆ. ಮತ್ತೊಂದು ಬದಿಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗುತ್ತದೆ. ನಿಗದಿತ ಗ್ಯಾಲರಿಗೆ ಹೋಗುವಂತೆ ಮಾಡಬೇಕಿರುವ ಕಾರಣ ಪ್ರವೇಶ ದ್ವಾರದಲ್ಲೇ ಮೂರು ಸಾಲು ಗಳನ್ನು ಮಾಡಲಿದ್ದು, ಇದರಿಂದಾಗಿ ಗಣ್ಯರ ಸಾಲಿನಲ್ಲಿ ಸಾರ್ವಜನಿಕರು ಕೂರುವುದನ್ನು ತಡೆಯುವಂತೆ ಮಾಡಲಾಗುತ್ತದೆ ಎಂದು ಹೇಳಿದರು.