Mysore
18
broken clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಜಂಬೂ ಸವಾರಿಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸ್ತಬ್ಧಚಿತ್ರದ್ದೇ ಈ ಸಲ ವಿಶೇಷ

ರಾಜ್ಯದ 30 ಜಿಪಂ ಸೇರಿದಂತೆ 43 ಸ್ತಬ್ಧ ಚಿತ್ರಗಳು ಅನಾವರಣ; ಈ ಬಾರಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸ್ತಬ್ಧಚಿತ್ರದ್ದೇ ವಿಶೇಷ

ಕೆ.ಬಿ.ರಮೇಶನಾಯಕ
ಮೈಸೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮ, ೭೫ ವರ್ಷಗಳಲ್ಲಿ ಮಾಡಿರುವ ಸಾಧನೆ, ಮೈಸೂರು ಜಿಲ್ಲೆಯ ವಿಶೇಷತೆಗಳ ಪ್ರದರ್ಶನ, ಹುಲಿ ಅಭಯಾರಣ್ಯ ಪ್ರದೇಶವಾಗಿರುವ ಬಂಡೀಪುರ, ಪ್ರಮುಖ ದೇವಾಲಯಗಳ ದರ್ಶನ, ಕೊಡಗು ಜಿಲ್ಲೆಯ ಪ್ರಕೃತಿಯ ಸಿರಿಸಂಪತ್ತು ಸೇರಿದಂತೆ ಹತ್ತು ಹಲವು ವಿಶೇಷತೆಗಳು ಈ ಬಾರಿಯ ಜಂಬೂ ಸವಾರಿ ಮೆರವಣಿಗೆಯಲ್ಲಿ ಅನಾವರಣಗೊಳ್ಳಲಿವೆ.
ಕರ್ನಾಟಕ, ಹೊರ ರಾಜ್ಯಗಳು, ಹೊರ ದೇಶಗಳ ಕೋಟ್ಯಂತರ ಜನರ ಕಣ್ಮನ ಸೆಳೆಯುವ ಜಂಬೂ ಸವಾರಿ ಮೆರವಣಿಗೆಯಲ್ಲಿ ಸಾಗುವ ಸ್ತಬ್ಧಚಿತ್ರಗಳು ಆಕರ್ಷಕ ಮಾದರಿ ಯಲ್ಲಿ ರೂಪುಗೊಳ್ಳುತ್ತಿವೆ. ಪ್ರತಿ ಸ್ತಬ್ಧಚಿತ್ರವೂ ವಿನೂತನವಾಗಿರಬೇಕೆಂಬ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ಬಯಕೆಗೆ ತಕ್ಕಂತೆ ಸ್ತಬ್ಧಚಿತ್ರ ಉಪ ಸಮಿತಿಯು ಪೂರಕವಾಗಿ ಚಿಂತನೆ ನಡೆಸಿ ಸ್ತಬ್ಧಚಿತ್ರ ತಯಾರು ಮಾಡುವಂತೆ ಹೇಳಲಾಗಿದೆ.
ರಾಜ್ಯದ ೩೦ ಜಿಲ್ಲೆಗಳ ಜಿಲ್ಲಾ ಪಂಚಾಯಿತಿಗಳು, ಕರ್ನಾಟಕ ಹಾಲು ಒಕ್ಕೂಟ, ಲಿಡ್ಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಮೈಸೂರು ವಿಶ್ವವಿದ್ಯಾನಿಲಯ, ಕೌಶಲಾಭಿವೃದ್ಧಿ ಇಲಾಖೆ ಸೇರಿದಂತೆ ೪೩ ಸ್ತಬ್ಧಚಿತ್ರಗಳು ಭಾಗವಹಿಸಲಿವೆ.
ಸ್ತಬ್ಧಚಿತ್ರ ಉಪ ಸಮಿತಿಗೆ ಈಗಾಗಲೇ ಆಯಾಯ ಜಿಪಂನಿಂದ ಸಿದ್ಧಪಡಿಸಲಿರುವ ಸ್ತಬ್ಧಚಿತ್ರಗಳ ಕಾನ್ಸೆಪ್ಟ್ ಕಳುಹಿಸಿದ್ದು, ಅದಕ್ಕೆ ಒಪ್ಪಿಗೆ ನೀಡಲಾಗಿದೆ. ದಸರಾ ಮಹೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ ಬಂಡೀಪಾಳ್ಯದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಸಿದ್ಧತೆ ಕೆಲಸಗಳು ಶುರುವಾಗಲಿವೆ.
ಅನಾವರಣಗೊಳ್ಳಲಿದೆ ಮೈಸೂರಿನ ವಿಶೇಷತೆ: ದೇಶ-ವಿದೇಶಗಳಲ್ಲಿ ಗಮನ ಸೆಳೆದಿರುವ ಮೈಸೂರಿನ ವಿಶೇಷತೆಯನ್ನು ಈ ಬಾರಿ ಅನಾವರಣಗೊಳ್ಳುವಂತಹ ಸ್ತಬ್ಧಚಿತ್ರ ತ ಯಾರಾಗಲಿದೆ. ಅರಮನೆ, ಪಾರಂಪರಿಕ ಕಟ್ಟಡಗಳು, ದೇವಾಲಯಗಳು, ಮೈಸೂರು ರೇಷ್ಮೆ, ವೀಳ್ಯೆದೆಲೆ, ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ, ಶ್ರೀಗಂಧ ಹಾ ಗೂ ಮೈಸೂರು ಪೇಟ ಮೊದಲಾದವುಗಳನ್ನು ಬಿಂಬಿಸಲಾಗುತ್ತಿದೆ. ಈಗಾಗಲೇ ಭೌಗೋಳಿಕವಾಗಿ ಗುರುತಿಸಿಕೊಂಡಿರುವ ವಿಶೇಷತೆಗಳ ಬಗ್ಗೆ ಮತ್ತಷ್ಟು ಗಮನ ಸೆಳೆಯು ವಂತೆ ಮಾಡುವ ಕೆಲಸ ನಡೆಯಲಿದೆ.
ಹುಲಿ ಸಂತತಿ, ಆನೆಗಳ ಸಂತತಿ, ಬಿಳಿಗಿರಿರಂಗನಬೆಟ್ಟ, ಮಲೆ ಮಹದೇಶ್ವರ ಬೆಟ್ಟ, ಬಂಡೀಪುರದ ರಮಣೀಯ ಪ್ರದರ್ಶನದಿಂದ ಕೂಡಿದ್ದರೆ, ಕೊಡಗು ಜಿಲ್ಲೆಯ ಪ್ರವಾಸೋ ದ್ಯಮ ತಾಣಗಳನ್ನು ಪರಿಚಯಿಸುವಂತೆ ಮಾಡಲಾಗುತ್ತಿದೆ. ಮಂಡ್ಯ ಜಿಲ್ಲೆಯ ಮೇಲುಕೋಟೆ, ಶ್ರೀರಂಗಪಟ್ಟಣದ ರಂಗನಾಥ ದೇವಾಲಯ ಸೇರಿದಂತೆ ಐತಿಹಾಸಿಕ ಸ್ಥಳಗಳ ಮಹಿಮೆಯನ್ನು ನೋಡುವ ರೀತಿ ಮಾಡಲಾಗುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳು ಸಂದಿರುವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ, ೭೫ ವರ್ಷ ಗಳಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸೇರಿದಂತೆ ಇನ್ನಿತರೆ ಕ್ಷೇತ್ರಗಳಲ್ಲಿ ಸಾಧಿಸಿರುವ ಪ್ರಗತಿ ಕುರಿತಂತೆ ಅನಾವರಣಗೊಳ್ಳಲಿದೆ. ಅದೇ ರೀತಿ ಪ್ರತಿಯೊಂದು ಜಿಲ್ಲೆಯ ವಿಶೇಷತೆ, ಭೌಗೋಳಿಕವಾಗಿ ಇರುವ ಪರಂಪರೆಯನ್ನು ಬಿಂಬಿಸುವಂತಹ ಸ್ತಬ್ಧಚಿತ್ರಗಳು ತಯಾರಾಗಲಿವೆ.

ರಾಜ್ಯದ ೩೦ ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ತಮ್ಮ ಜಿಲ್ಲೆಯ ವಿಶೇಷವಾದ ಮಾದರಿ ರೂಪಿಸಬೇಕೆಂದು ಜಿಲ್ಲಾಡಳಿತದ ವತಿಯಿಂದ ಈಗಾಗಲೇ ಪತ್ರ ವ್ಯವಹಾರ ಮಾಡಲಾಗಿದ್ದು, ಕಳೆದ ವರ್ಷಕ್ಕಿಂತ ಭಿನ್ನವಾಗಿ ಸುಂದರವಾದ ಸ್ತಬ್ಧಚಿತ್ರಗಳನ್ನು ರೂಪಿಸಬೇಕೆಂದು ಸೂಚನೆಯನ್ನೂ ನೀಡಲಾಗಿದೆ.
-ಧನುಷ್, ಕಾರ್ಯದರ್ಶಿ, ಸ್ತಬ್ಧಚಿತ್ರ ಉಪ ಸಮಿತಿ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ