Mysore
26
light rain

Social Media

ಶುಕ್ರವಾರ, 31 ಜುಲೈ 2026
Light
Dark

ನಾಪೋಕ್ಲುವಿನ ಶ್ರೀಮಕ್ಕಿ ಶಾಸ್ತಾವು ದೇವಾಲಯದಲ್ಲಿ ಕಳವು

ಕೊಡಗು : ಇಲ್ಲಿನ ಪ್ರಸಿದ್ದ ದೇವಾಲಯವಾದ  ನಾಪೋಕ್ಲುವಿನ ಶ್ರೀಮಕ್ಕಿ ಶಾಸ್ತಾ ದಲ್ಲಿ ಕಳ್ಳತನವಾಗಿದ್ದು,
ದೇವಾಲಯದಲ್ಲಿ ಪುರಾತನ 13,12,5 ಕೆಜಿ ತೂಕದ ತಾಮ್ರದ ಗಂಟೆಗಳನ್ನು ಕಳವು ಮಾಡಲಾಗಿದೆ.
ಮಧ್ಯರಾತ್ರಿ ಈ ಘಟನೆಯು ನಡೆದಿದೆ ಎನ್ನಲಾಗಿದ್ದು, ಪ್ರಕರಣವು ಸಿಸಿ ಕ್ಯಾಮರದಲ್ಲಿ ದಾಖಲಾಗುತ್ತದೆಂದು ಸಿಸಿ ಕ್ಯಾಮರವನ್ನು ನಾಶಪಡಿಸಿ ಗಂಟೆಗಳನ್ನು ಕಳ್ಳರು  ಕದ್ದೊಯ್ದಿದ್ದಾರೆ.
ಈ ಬಗ್ಗೆ  ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕುಟ್ಟಂಜೆಟ್ಟೀರ ಶಾಂ ಬೋಪಣ್ಣ ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದು ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೂಡಲೇ ಕಳ್ಳರನ್ನು ಬಂಧಿಸುವಂತೆ ಗ್ರಾಮಸ್ಥರ ಒತ್ತಾಯಿಸಿದ್ದಾರೆ.  ಸ್ಥಳಕ್ಕೆ ನಾಪೋಕ್ಲು ಠಾಣಾಧಿಕಾರಿ ಸದಾಶಿವ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!