ಅಮಿತಾಭ್ ಬಚ್ಚನ್ ಅವರು ಚಿತ್ರರಂಗದಲ್ಲಿ ಹಲವು ದಶಕಗಳನ್ನು ಕಳೆದಿದ್ದಾರೆ. ಅನೇಕ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಅವರು ವೃತ್ತಿ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಈ ಸಂದರ್ಭದಲ್ಲಿ ಫ್ಯಾನ್ಸ್ ಸದಾ ಅವರ ಜತೆಗೆ ಇದ್ದರು. ಅವರ ಮೇಲಿರುವ ಪ್ರೀತಿಯನ್ನು ಫ್ಯಾನ್ಸ್ ನಾನಾ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಈಗ ಅಮೆರಿಕದಲ್ಲಿ ವಾಸವಾಗಿರುವ ಭಾರತ ಮೂಲದ ವ್ಯಕ್ತಿ ಅಮಿತಾಭ್ ಮೇಲಿರುವ ಪ್ರೀತಿಯನ್ನು ಭಿನ್ನ ರೀತಿಯಲ್ಲಿ ತೋರಿದ್ದಾರೆ.
ಅಮಿತಾಭ್ ಬಚ್ಚನ್ ಅವರ ಅಭಿಮಾನಿ ಗೋಪಿ ಅವರು ಹಲವು ವರ್ಷಗಳ ಹಿಂದೆ ಅಮೆರಿಕದ ನ್ಯೂ ಜೆರ್ಸಿಗೆ ತೆರಳಿ ಅಲ್ಲಿಯೇ ವಾಸವಾಗಿದ್ದಾರೆ. ಅಲ್ಲಿ ಹೊಸ ಮನೆ ಕಟ್ಟಿದ್ದಾರೆ. ಈ ಮನೆಯ ಎದುರು ಅವರು ಅಮಿತಾಭ್ ಬಚ್ಚನ್ ಅವರ ಪ್ರತಿಮೆ ನಿರ್ಮಾಣ ಮಾಡಿದ್ದಾರೆ. ಈ ಫೋಟೋಗಳನ್ನು ಗೋಪಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘ಶನಿವಾರ, ಆಗಸ್ಟ್ 27ರಂದು ಅಮಿತಾಭ್ ಬಚ್ಚನ್ ಅವರ ಪ್ರತಿಮೆಯನ್ನು ಮನೆಯ ಎದುರು ನಿರ್ಮಾಣ ಮಾಡಿದ್ದೇವೆ. ಅಮಿತಾಭ್ ಪ್ರತಿಮೆ ಅನಾವರಣಕ್ಕೆ ಅವರ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರು’ ಎಂದು ಗೋಪಿ ಬರೆದುಕೊಂಡಿದ್ದಾರೆ.
‘ಅಮಿತಾಭ್ ಅವರು ನನಗೆ ಮತ್ತು ನನ್ನ ಪತ್ನಿಗೆ ದೇವರಿಗಿಂತ ಹೆಚ್ಚು. ಅವರ ಎಲ್ಲ ವಿಚಾರಗಳು ನನಗೆ ಸ್ಫೂರ್ತಿದಾಯಕ. ಅವರು ತುಂಬಾ ಸರಳ ವ್ಯಕ್ತಿ. ಅವರು ಇತರ ಸ್ಟಾರ್ಗಳ ರೀತಿ ಅಲ್ಲ. ಈ ಕಾರಣಕ್ಕೆ ನಮ್ಮ ಮನೆ ಎದುರು ಅವರ ಪ್ರತಿಮೆ ನಿರ್ಮಿಸಲು ನಿರ್ಧರಿಸಿದೆ’ ಎಂದು ಪಿಟಿಐಗೆ ಗೋಪಿ ಮಾಹಿತಿ ನೀಡಿದ್ದಾರೆ.
👆🏻👆🏻On Saturday august 27th we have placed @SrBachchan statue 👆🏻👆🏻👆🏻👆🏻at outside in the front of our new home in edison NJ USA . Lots of Mr Bachchan’s fan’s participated on Mr Bachchan’s staue inoguration ceremony. pic.twitter.com/O3RklFS5eZ
— Gopi EFamily (@GopiSheth) August 28, 2022