Mysore
21
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಚಾ.ನಗರ : ನಗರಸಭೆಯಿಂದ ಹರಿದ, ಏರುಪೇರು ಅಳತೆಯ ತ್ರಿವರ್ಣ ಧ್ವಜಗಳ ಪೂರೈಕೆ

ಚಾಮರಾಜನಗರ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನದ ಪ್ರಯುಕ್ತ ರಾಷ್ಟ್ರಧ್ವಜಗಳನ್ನು ಹಾರಿಸಲು ಮುಂದಾದ ನಗರದ ವರ್ತಕರಿಗೆ ನಗರಸಭೆ ಕಳಪೆ ರಾಷ್ಟ್ರಧ್ವಜ ಪೂರೈಸಿದೆ ಎಂದು ವರ್ತಕ ಚಿದಾನಂದ ಗಣೇಶ್ ತಿಳಿಸಿದರು.

ಚಾಮರಾಜನಗರ ವರ್ತಕರ ಸಂಘದಿಂದ 5 ಸಾವಿರ ಹಣ ಕೊಟ್ಟು 200ಕ್ಕೂ ಹೆಚ್ಚು ಧ್ವಜವನ್ನು ಚಾಮರಾಜನಗರ ನಗರಸಭೆಯಿಂದ ತರಿಸಿಕೊಳ್ಳಲಾಗಿದೆ. ಆದರೆ ಹರಿದ, ಅಳತೆ ಏರುಪಾರಾಗಿರುವ, ಬಣ್ಣ ಮಾಸಿದ ತ್ರಿವರ್ಣ ಧ್ವಜಗಳನ್ನು ಪೂರೈಸಿ ವರ್ತಕರ ಕೆಂಗಣ್ಣಿಗೆ ಗುರಿಯಾಗಿದೆ.

ಈ ಸಂಬಂಧ ವರ್ತಕರ ಸಂಘದ ಚಿದಾನಂದ ಗಣೇಶ್ ಮಾತನಾಡಿ, ನಗರಸಭೆಯಿಂದ ಎಲ್ಲಾ ವರ್ತಕರಿಗೆ‌‌ ವಿತರಿಸಲು 200ಕ್ಕೂ ಹೆಚ್ಚು ರಾಷ್ಟ್ರಧ್ವಜಗಳನ್ನು ಖರೀದಿಸಿದ್ದೆವು.‌

ಆದರೆ‌‌ 200ರಲ್ಲಿ 15 ರಿಂದ 20 ಧ್ವಜಗಳು ಮಾತ್ರ ಹಾರಿಸಲು ಯೋಗ್ಯವಾಗಿವೆ. ನಗರಸಭೆ ಸಿಬ್ಬಂದಿ ಹೇಗೆ ತಂದರೋ, ಧ್ವಜ ನಿರ್ಮಾಣ ಮಾಡುವವರು ಎಷ್ಟು ನಿರ್ಲಕ್ಷ್ಯ ವಹಿಸಿದ್ದಾರೋ ಎಂದು ಆಕ್ರೋಶ ಹೊರಹಾಕಿದರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ