ಮಡಿಕೇರಿ : ನಿರಂತರ ಮಳೆ ಕಾರಣ ಸಂಭವನೀಯ ಮಣ್ಣು, ಗುಡ್ಡ ಪ್ರದೇಶಗಳ ಬಳಿ ವಾಸವಿರುವ ಜನರನ್ನು ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದ ವತಿಯಿಂದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಈ ಸಂದರ್ಭದಲ್ಲಿ ಸಚಿವ ಬಿ.ಸಿ ನಾಗೇಶ್ ಅವರು ಭೇಟಿ ನೀಡಿ ಅಲ್ಲಿನ ಜನರೊಟ್ಟಿಗೆ ಮಾತನಾಡಿದರು.
ಕಾಳಜಿ ಕೇಂದ್ರಕ್ಕೆ ಶಾಸಕರಾದ ಅಪ್ಪಚ್ಚು ರಂಜನ್ ರನ್ನು ಭೇಟಿ ಮಾಡಿದ ನಾಗೇಶ್ ಅವರು ಮಾತನಾಡಿದರು. ಕಾಳಜಿ ಕೇಂದ್ರದಲ್ಲಿರುವರಿಗೆ ಉತ್ತಮ ಆಹಾರ, ವೈದ್ಯಕೀಯ ತಪಾಸಣೆ ಸೇರಿದಂತೆ ಅಗತ್ಯ ವಸ್ತುಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಜೊತೆಗೆ ಕಾಳಜಿ ಕೇಂದ್ರದಲ್ಲಿರುವ ಪುಟ್ಟ ಬಾಲಕನೊಬ್ಬನ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.