ಬೆಂಗಳೂರು: ಬೆನ್ನುನೋವಿನಿಂದ ಬಳಲುತ್ತಿರುವ ನಟ ದರ್ಶನ್ಗೆ ಜೈಲಿನಲ್ಲೇ ಫಿಸಿಯೋಥೆರಪಿ ಚಿಕಿತ್ಸೆ ಆರಂಭಿಸಲಾಗಿದೆ.
ಕೋರ್ಟ್ ಸೂಚನೆಯ ಹಿನ್ನೆಲೆಯಲ್ಲಿ ಜೈಲಾಧಿಕಾರಿಗಳು ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದು, ಸಂಜಯ್ ಗಾಂಧಿ ಆಸ್ಪತ್ರೆಯ ಫಿಸಿಯೋಥೆರಪಿ ತಜ್ಞರು ಜೈಲಿಗೆ ಭೇಟಿ ನೀಡಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರತಿ ಎರಡು–ಮೂರು ದಿನಗಳಿಗೊಮ್ಮೆ ತಜ್ಞರು ಭೇಟಿ ನೀಡಲಿದ್ದು, ಅಗತ್ಯ ವೈದ್ಯಕೀಯ ಉಪಕರಣಗಳನ್ನು ತಂದು ಬ್ಯಾರಕ್ನಲ್ಲೇ ಸುಮಾರು ಒಂದೂವರೆ ಗಂಟೆಗಳ ಕಾಲ ಚಿಕಿತ್ಸೆ ನೀಡುತ್ತಿರುವುದಾಗಿ ತಿಳಿದುಬಂದಿದೆ.
ಈ ಹಿಂದೆಯೂ ಇದೇ ಆಸ್ಪತ್ರೆಯ ವೈದ್ಯರಿಂದ ದರ್ಶನ್ಗೆ ಚಿಕಿತ್ಸೆ ಕೊಡಿಸಲಾಗಿತ್ತು. ಆಗ ಹಂತ ಹಂತವಾಗಿ ನೀಡಿದ ಫಿಸಿಯೋಥೆರಪಿಯಿಂದ ನಟ ದರ್ಶನ್ಗೆ ಬೆನ್ನುನೋವು ಕಡಿಮೆಯಾಗಿತ್ತು.
ಇದೀಗ ಮತ್ತೆ ಚಿಕಿತ್ಸೆ ಆರಂಭವಾಗಿದ್ದು, ದರ್ಶನ್ಗೆ ಬೆನ್ನುನೋವಿನಿಂದ ಕೊಂಚ ನಿರಾಳತೆ ಸಿಕ್ಕಿರುವುದಾಗಿ ಮಾಹಿತಿ ಲಭ್ಯವಾಗಿದೆ.




