Mysore
26
haze

Social Media

ಬುಧವಾರ, 11 ನವೆಂಬರ್ 2026
Light
Dark

ಪಡಿತರ ಇ-ಕೆವೈಸಿ ಗಡುವು ನ.30ರವರೆಗೆ ವಿಸ್ತರಣೆ 

ಬೆಂಗಳೂರು: ಪಡಿತರ ಚೀಟಿದಾರರೇ, ಇನ್ನೂ ಇ-ಕೆವೈಸಿ ಮಾಡಿಸಿಲ್ಲವೇ? ನಿಮಗೊಂದು ಸಿಹಿಸುದ್ದಿ! ಇ-ಕೆವೈಸಿ ಪೂರ್ಣಗೊಳಿಸಲು ನಿಗದಿಪಡಿಸಿದ್ದ ಗಡುವನ್ನು ನವೆಂಬರ್‌ 30ರವರೆಗೆ ವಿಸ್ತರಿಸಲಾಗಿದೆ.

ನ್ಯಾಯಬೆಲೆ ಅಂಗಡಿಗೆ ಹೋಗಲು ಸಮಯವಿಲ್ಲದಿದ್ದರೆ, ಮನೆಯಲ್ಲೇ ಅನ್ನಸೇವೆ ಆ್ಯಪ್ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸಬಹುದು.

ಅನ್ನಸೇವೆ ಆ್ಯಪ್‌ನಲ್ಲಿ ‘ಸ್ವಯಂ/ನಾಗರಿಕ’ ಆಯ್ಕೆ ಮಾಡಿ. ನಿಮ್ಮ ಜಿಲ್ಲೆ ಆಯ್ದು, ಪಡಿತರ ಚೀಟಿ ಸಂಖ್ಯೆ ಹಾಗೂ ಅದಕ್ಕೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ ನಮೂದಿಸಿ.

ಮೊಬೈಲ್‌ಗೆ ಬರುವ ಒಟಿಪಿ ದಾಖಲಿಸಿ. ನಂತರ ಇ-ಕೆವೈಸಿ ಮಾಡಬೇಕಾದ ಕುಟುಂಬ ಸದಸ್ಯರನ್ನು ಆಯ್ಕೆ ಮಾಡಿ, ಸೂಚನೆಯಂತೆ ಮುಖ ಗುರುತಿಸುವಿಕೆ ಪ್ರಕ್ರಿಯೆ ಪೂರ್ಣಗೊಳಿಸಿ.

‘ಇ-ಕೆವೈಸಿ ಯಶಸ್ವಿ’ ಎಂಬ ಸಂದೇಶ ಬಂದರೆ ಪ್ರಕ್ರಿಯೆ ಪೂರ್ಣಗೊಂಡಂತೆ ಆಗುತ್ತದೆ. ಸಮೀಪದ ನ್ಯಾಯಬೆಲೆ ಅಂಗಡಿಯಲ್ಲೂ ಇ-ಕೆವೈಸಿ ಮಾಡಿಸಬಹುದು. ಆದರೆ ಅದನ್ನು ನವೆಂಬರ್‌ 30ರೊಳಗೆ ಪೂರ್ಣಗೊಳಿಸಿ.

Tags:
error: Content is protected !!