ಬೆಂಗಳೂರು: ದೀಪಾವಳಿ ಸಂಭ್ರಮದ ಬೆನ್ನಲ್ಲೇ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚಾಗಿದೆ. ನಗರದ ವಾಯು ಗುಣಮಟ್ಟ ಸೂಚ್ಯಂಕ, ಅಂದರೆ ಎಕ್ಯೂಐ, 186ಕ್ಕೆ ತಲುಪಿದೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಹಿತಿ ಪ್ರಕಾರ, ಭಾನುವಾರ ರಾತ್ರಿ 8 ಗಂಟೆಗೆ ಎಕ್ಯೂಐ 74 ಇತ್ತು. ಪಟಾಕಿ ಸದ್ದು ಜೋರಾಗುತ್ತಿದ್ದಂತೆ ರಾತ್ರಿ 10ಕ್ಕೆ 85ಕ್ಕೆ, 11ಕ್ಕೆ 93ಕ್ಕೆ ಏರಿತು. ಮಧ್ಯರಾತ್ರಿ ಬಳಿಕ 102 ತಲುಪಿತು.
ವರದಿಯ ಪ್ರಕಾರ, ಕಳೆದ ವರ್ಷದ ದೀಪಾವಳಿಗೆ ಹೋಲಿಸಿದರೆ ಈ ಬಾರಿ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಶೇಕಡಾ 25ರಷ್ಟು ಹೆಚ್ಚಾಗಿದೆ.




