Mysore
29
broken clouds

Social Media

ಮಂಗಳವಾರ, 10 ನವೆಂಬರ್ 2026
Light
Dark

ರೇಷನ್ ಕಾರ್ಡ್ ಇ-ಕೆವೈಸಿಗೆ ಇಂದೇ ಕೊನೆ ದಿನ!

ಬೆಂಗಳೂರು: ನಿಮ್ಮ ರೇಷನ್ ಕಾರ್ಡ್‌ಗೆ ಇನ್ನೂ ಇ-ಕೆವೈಸಿ ಮಾಡಿಸಿಲ್ವಾ? ಹಾಗಿದ್ದರೆ ಗಮನಿಸಿ. ಇ-ಕೆವೈಸಿ ಮಾಡಿಸಲು ಇಂದೇ ಕೊನೆಯ ದಿನ!

ಈಗಾಗಲೇ ಎರಡು ಬಾರಿ ಗಡುವು ವಿಸ್ತರಿಸಿದ್ದ ಆಹಾರ ಇಲಾಖೆ, ನವೆಂಬರ್ 10ರವರೆಗೆ ಅಂತಿಮ ಅವಕಾಶ ನೀಡಿದೆ. ಮತ್ತೆ ಗಡುವು ವಿಸ್ತರಿಸುವುದಿಲ್ಲ ಎಂದು ಆಹಾರ ಸಚಿವರು ತಿಳಿಸಿದ್ದಾರೆ.

ವರದಿಯ ಪ್ರಕಾರ, ರಾಜ್ಯದಲ್ಲಿ ಇನ್ನೂ 39 ಲಕ್ಷಕ್ಕೂ ಹೆಚ್ಚು ಪಡಿತರ ಚೀಟಿದಾರರು ಇ-ಕೆವೈಸಿ ಪೂರ್ಣಗೊಳಿಸಿಲ್ಲ. ಗಡುವಿನೊಳಗೆ ಮಾಡಿಸದಿದ್ದರೆ ಪಡಿತರ ಚೀಟಿ ರದ್ದಾಗುವ ಸಾಧ್ಯತೆ ಇದೆ.

ಇನ್ನೂ ಇ-ಕೆವೈಸಿ ಬಾಕಿ ಇದ್ದರೆ, ಇಂದೇ ಸಮೀಪದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪ್ರಕ್ರಿಯೆ ಪೂರ್ಣಗೊಳಿಸಿ.

Tags:
error: Content is protected !!