ಬೆಂಗಳೂರು: ಕರ್ನಾಟಕದಲ್ಲಿ ಅಕ್ಕಿ ಬೆಲೆ ಏರಿಕೆ ಜನಸಾಮಾನ್ಯರ ಜೇಬಿಗೆ ಬಿಸಿ ಮುಟ್ಟಿಸಿದೆ. ವರದಿಯ ಪ್ರಕಾರ, ಕಳೆದ ನಾಲ್ಕು ತಿಂಗಳಲ್ಲಿ ಸರಾಸರಿ ಚಿಲ್ಲರೆ ಬೆಲೆ ಶೇಕಡಾ 30ರಷ್ಟು ಹೆಚ್ಚಾಗಿದೆ.
ಎರಡು ತಿಂಗಳಲ್ಲೇ ಸೋನಾ ಮಸೂರಿ ಅಕ್ಕಿ ಕೆಜಿಗೆ 20 ರೂಪಾಯಿ ದುಬಾರಿಯಾಗಿದೆ. ಸದ್ಯ ಹಳೆಯ ಸೋನಾ ಮಸೂರಿ ಕೆಜಿಗೆ 82ರಿಂದ 98 ರೂಪಾಯಿ, ಜೀರಿಗೆ ಅಕ್ಕಿ 90ರಿಂದ 115 ರೂಪಾಯಿ ಹಾಗೂ ಬುಲೆಟ್ ಅಕ್ಕಿ ಸುಮಾರು 95 ರೂಪಾಯಿಗೆ ಮಾರಾಟವಾಗುತ್ತಿದೆ.
ಮಾರುಕಟ್ಟೆಗಳಲ್ಲಿ ಭತ್ತದ ಆವಕ ಶೇಕಡಾ 10ರಿಂದ 40ರಷ್ಟು ಕುಸಿದಿದೆ. ಮಳೆ ಕೊರತೆ, ನೀರು ಬಿಡುಗಡೆ ವಿಳಂಬ ಹಾಗೂ ಪೂರೈಕೆ ಕುಸಿತ ಬೆಲೆ ಏರಿಕೆಗೆ ಕಾರಣವೆಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಎರಡನೇ ಬೆಳೆಗೂ ನೀರಿನ ಆತಂಕ ಎದುರಾಗಿದ್ದು, ಮುಂದಿನ ದಿನಗಳಲ್ಲಿ ಅಕ್ಕಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.




