ಹಾಸನ: ಅಕ್ಟೋಬರ್.29ರಿಂದ ನವೆಂಬರ್.11ರವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಹಾಸನ ನಗರದ ಸಾಲಗಾಮೆ ರಸ್ತೆಯಲ್ಲಿರುವ ಜಿಲ್ಲಾ ಖಜಾನೆಯಿಂದ ಒಡವೆಗಳನ್ನು ರಥದಲ್ಲಿ ಅಧಿಕಾರಿಗಳು ಹಾಗೂ ಅರ್ಚಕರು ಕೊಂಡೊಯ್ದಿದ್ದಾರೆ.
ಹಾಸನಾಂಬಾ ದೇವಿಯ ಆಭರಣಗಳನ್ನು ಖಜಾನೆಯಿಂದ ಬಿಗಿ ಪೊಲೀಸ್ ಭದ್ರತೆಯಲ್ಲಿ ದೇವಾಲಯಕ್ಕೆ ರವಾನಿಸಲಾಯಿತು. ದೇವಿಯ ಅಲಂಕಾರಕ್ಕಾಗಿ ಒಡವೆಗಳನ್ನು ಸುರಕ್ಷಿತವಾಗಿ ದೇವಾಲಯಕ್ಕೆ ತರಲಾಯಿತು.
ಆಭರಣಗಳ ಸಾಗಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿತ್ತು. ಹಾಸನಾಂಬಾ ದರ್ಶನೋತ್ಸವದ ಸಂಭ್ರಮದ ನಡುವೆ ದೇವಿಯ ಅಲಂಕಾರಕ್ಕೆ ಸಿದ್ಧತೆಗಳು ಚುರುಕುಗೊಂಡಿವೆ.




