Mysore
28
overcast clouds

Social Media

ಸೋಮವಾರ, 26 ಅಕ್ಟೋಬರ್ 2026
Light
Dark

ಬ್ರೆಜಿಲ್‌ನಲ್ಲಿ ಲುಲಾಗೆ ಮತ್ತೆ ಜನಾದೇಶ; ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ

ಬ್ರೆಜಿಲ್‌: ಬ್ರೆಜಿಲ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಲುಯಿಜ್‌ ಇನಾಸಿಯೊ ಲುಲಾ ಡ ಸಿಲ್ವಾ ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ. ಅಕ್ಟೋಬರ್‌ 25ರಂದು ನಡೆದ ಎರಡನೇ ಸುತ್ತಿನ ಮತದಾನದಲ್ಲಿ ಬಲಪಂಥೀಯ ಅಭ್ಯರ್ಥಿ ಫ್ಲಾವಿಯೊ ಬೊಲ್ಸೊನಾರೊ ಅವರನ್ನು ಸೋಲಿಸಿ, ನಾಲ್ಕನೇ ಅಧ್ಯಕ್ಷೀಯ ಅವಧಿಗೆ ಆಯ್ಕೆಯಾಗಿದ್ದಾರೆ.

ಲುಲಾ ಸುಮಾರು ಶೇ.51.8ರಷ್ಟು ಮತಗಳನ್ನು ಪಡೆದಿದ್ದು, ಎದುರಾಳಿಗಿಂತ ಸುಮಾರು 44 ಲಕ್ಷ ಮತಗಳ ಮುನ್ನಡೆ ಸಾಧಿಸಿದ್ದಾರೆ. ಮೊದಲ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದ್ದ ಅವರು ಅಂತಿಮ ಸುತ್ತಿನಲ್ಲಿ ಗೆಲುವು ದಾಖಲಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ನೀತಿಗಳ ಟೀಕಾಕಾರರಾಗಿರುವ ಲುಲಾ, ಬ್ರೆಜಿಲ್‌ನ ಸಾರ್ವಭೌಮತ್ವ ಮತ್ತು ಸ್ವತಂತ್ರ ವಿದೇಶಾಂಗ ನೀತಿಯನ್ನು ಪ್ರತಿಪಾದಿಸುತ್ತಿದ್ದಾರೆ. ಅವರು ಈ ಹಿಂದೆ 2003ರಿಂದ 2010ರವರೆಗೆ ಎರಡು ಅವಧಿ ಅಧ್ಯಕ್ಷರಾಗಿದ್ದು, 2023ರಲ್ಲಿ ಮೂರನೇ ಅವಧಿಗೆ ಅಧಿಕಾರಕ್ಕೆ ಮರಳಿದ್ದರು. ಈಗ ನಾಲ್ಕನೇ ಅವಧಿಗೆ ಜನಾದೇಶ ಪಡೆದಿದ್ದಾರೆ.

ಈ ನಡುವೆ ಫ್ಲಾವಿಯೊ ಬೊಲ್ಸೊನಾರೊ ಸೋಲು ಒಪ್ಪಿಕೊಳ್ಳಲು ನಿರಾಕರಿಸಿದ್ದು, ಮತದಾನದ ಅವಧಿಯನ್ನು ಎರಡು ಗಂಟೆ ವಿಸ್ತರಿಸಿದ ನಿರ್ಧಾರ ಪ್ರಶ್ನಿಸಿ ಚುನಾವಣೆ ರದ್ದತಿಗೆ ಮನವಿ ಮಾಡುವುದಾಗಿ ಹೇಳಿದ್ದಾರೆ.

Tags:
error: Content is protected !!