Mysore
28
light rain

Social Media

ಗುರುವಾರ, 22 ಅಕ್ಟೋಬರ್ 2026
Light
Dark

ನಾಡಿನಿಂದ ಕಾಡಿನತ್ತ ದಸರಾ ಗಜಪಡೆ: ಪೂಜೆ ಸಲ್ಲಿಸಿ ಬೀಳ್ಕೊಡುಗೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಯಶಸ್ವಿಯಾಗಿ ನೆರವೇರಿದ ಬೆನ್ನಲ್ಲೇ, ದಸರಾ ಗಜಪಡೆ ನಾಡಿನಿಂದ ಕಾಡಿನತ್ತ ಹೊರಟಿವೆ.

ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಆನೆಗಳಿಗೆ ಸಾಂಪ್ರದಾಯಿಕವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಅಭಿಮನ್ಯು, ಪ್ರಶಾಂತ, ಧನಂಜಯ, ಏಕಲವ್ಯ, ಮಹೇಂದ್ರ, ಗೋಪಿ, ಶ್ರೀರಾಮ, ಶ್ರೀಕಂಠ, ಸುಗ್ರೀವ, ಕಾವೇರಿ, ಚೈತ್ರಾ, ರೂಪಾ ಹಾಗೂ ಲಕ್ಷ್ಮೀ ಸೇರಿದಂತೆ 13 ಆನೆಗಳು ಪೂಜೆಯಲ್ಲಿ ಭಾಗಿಯಾದವು.

ಜಂಬೂಸವಾರಿಯ ಯಶಸ್ಸಿಗೆ ತಮ್ಮದೇ ಕೊಡುಗೆ ನೀಡಿದ ಗಜಪಡೆಗೆ ಫಲತಾಂಬೂಲ ನೀಡಿ ಗೌರವಪೂರ್ವಕವಾಗಿ ಬೀಳ್ಕೊಡಲಾಯಿತು. ದಸರಾ ಸಂಭ್ರಮಕ್ಕೆ ಮೆರುಗು ತಂದ ಆನೆಗಳು ಇದೀಗ ತಮ್ಮ ಶಿಬಿರಗಳತ್ತ ಮರಳಿದವು.

Tags:
error: Content is protected !!