Mysore
26
overcast clouds

Social Media

ಬುಧವಾರ, 21 ಅಕ್ಟೋಬರ್ 2026
Light
Dark

ಮೈಸೂರು ದಸರಾ ಮಹೋತ್ಸವ: ವಜ್ರಮುಷ್ಠಿ ಕಾಳಗ ರದ್ದು

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಐತಿಹಾಸಿಕ ಸಂಪ್ರದಾಯಗಳಲ್ಲಿ ಒಂದಾದ ವಜ್ರಮುಷ್ಠಿ ಕಾಳಗವನ್ನು ಈ ಬಾರಿ ರದ್ದುಪಡಿಸಲಾಗಿದೆ. ಅರಮನೆಯ ಸವಾರಿ ತೊಟ್ಟಿಯಲ್ಲಿ ನಡೆಯಬೇಕಿದ್ದ ಈ ಸಾಂಪ್ರದಾಯಿಕ ಕಾಳಗ ರದ್ದಾಗಿರುವುದು ಇತಿಹಾಸ ಪ್ರಿಯರಲ್ಲಿ ತೀವ್ರ ನಿರಾಸೆ ಮೂಡಿಸಿದೆ.

ಮೈಸೂರು ದಸರೆಯ ರಾಜಪರಂಪರೆ ಹಾಗೂ ಸಾಂಪ್ರದಾಯಿಕ ಆಚರಣೆಗಳಲ್ಲಿ ವಜ್ರಮುಷ್ಠಿ ಕಾಳಗಕ್ಕೆ ವಿಶೇಷ ಸ್ಥಾನವಿದೆ. ದಸರೆಯ ವೈಭವದೊಂದಿಗೆ ಬೆಸೆದುಕೊಂಡಿರುವ ಈ ಆಚರಣೆಯನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದವರಿಗೆ ಈ ಬಾರಿಯ ನಿರ್ಧಾರ ನಿರಾಸೆ ತಂದಿದೆ.

ಅರಮನೆಯ ಸವಾರಿ ತೊಟ್ಟಿಯಲ್ಲಿ ನಡೆಯಬೇಕಿದ್ದ ಕಾಳಗ ಈ ಬಾರಿ ರದ್ದಾಗಿದೆ. ಮಾಹಿತಿ ಪ್ರಕಾರ ಜಟ್ಟಿಗಳ ಪೂಜೆಯಲ್ಲಿ ವಿಳಂಬವಾಗಿರುವುದೇ ಕಾಳಗ ರದ್ದಿಗೆ ಕಾರಣ ಎನ್ನಲಾಗಿದೆ.

Tags:
error: Content is protected !!