Mysore
28
light rain

Social Media

ಸೋಮವಾರ, 19 ಅಕ್ಟೋಬರ್ 2026
Light
Dark

ಆಸ್ಪತ್ರೆಯಿಂದ ಎಲ್.‌ಕೆ.ಅಡ್ವಾಣಿ ಡಿಸ್ಚಾರ್ಜ್‌

ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಉಪಪ್ರಧಾನಿ ಎಲ್‌.ಕೆ. ಅಡ್ವಾಣಿ ಅವರ ಆರೋಗ್ಯದಲ್ಲಿ ಸುಧಾರಣೆಯಾಗಿದ್ದು, ದೆಹಲಿಯ ಅಪೋಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ.

ಎದೆ ಸೋಂಕಿನ ಹಿನ್ನೆಲೆಯಲ್ಲಿ ಅಕ್ಟೋಬರ್‌ 16ರಂದು ಅಡ್ವಾಣಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಇರಿಸಿ ವೈದ್ಯರು ಚಿಕಿತ್ಸೆ ನೀಡಿದ್ದರು.

ಹಿರಿಯ ನರರೋಗ ತಜ್ಞ ಡಾ. ವಿನೀತ್‌ ಸೂರಿ ಅವರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆದ ಅಡ್ವಾಣಿ ಅವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿರುವುದಾಗಿ ಆಸ್ಪತ್ರೆ ತಿಳಿಸಿದೆ. ಮೂರು ದಿನಗಳ ಚಿಕಿತ್ಸೆಯ ಬಳಿಕ ಅಕ್ಟೋಬರ್‌ 19ರಂದು ಅವರನ್ನು ಡಿಸ್ಚಾರ್ಜ್‌ ಮಾಡಲಾಗಿದೆ.

Tags:
error: Content is protected !!