Mysore
27
light rain

Social Media

ಭಾನುವಾರ, 18 ಅಕ್ಟೋಬರ್ 2026
Light
Dark

ಮೈಸೂರಿನ ಜೆಕೆ ಮೈದಾನದಲ್ಲಿ ಶ್ವಾನಗಳ ಕಲರವ: ಗಮನ ಸೆಳೆದ ವೈವಿಧ್ಯಮಯ ತಳಿಗಳು

ಮೈಸೂರು: ಇಲ್ಲಿನ ಜೆಕೆ ಮೈದಾನದಲ್ಲಿ ಆಯೋಜಿಸಿರುವ ಶ್ವಾನ ಪ್ರದರ್ಶನವು ಶ್ವಾನಪ್ರಿಯರ ಗಮನ ಸೆಳೆಯುತ್ತಿದೆ. ಪ್ರದರ್ಶನದಲ್ಲಿ 50ಕ್ಕೂ ಹೆಚ್ಚು ತಳಿಗಳ ಸಾವಿರಕ್ಕೂ ಅಧಿಕ ಶ್ವಾನಗಳು ಭಾಗವಹಿಸಿದ್ದು, ಅವುಗಳನ್ನು ಕಣ್ತುಂಬಿಕೊಳ್ಳಲು ಜನರು ಆಗಮಿಸುತ್ತಿದ್ದಾರೆ.

ವಿಭಿನ್ನ ಗಾತ್ರ, ಬಣ್ಣ ಹಾಗೂ ಆಕರ್ಷಕ ನೋಟದ ಶ್ವಾನಗಳು ಪ್ರದರ್ಶನದ ಆಕರ್ಷಣೆಯಾಗಿವೆ. ತಮ್ಮ ನೆಚ್ಚಿನ ಶ್ವಾನಗಳನ್ನು ಹತ್ತಿರದಿಂದ ಕಂಡು ಖುಷಿಪಡುತ್ತಿರುವ ಶ್ವಾನಪ್ರಿಯರು, ಅವುಗಳ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.

ಒಂದೇ ಸ್ಥಳದಲ್ಲಿ ಹಲವು ತಳಿಗಳ ಶ್ವಾನಗಳನ್ನು ನೋಡುವ ಅವಕಾಶ ದೊರೆತಿದ್ದು, ಪ್ರದರ್ಶನವು ಶ್ವಾನಪ್ರಿಯರ ಉತ್ಸಾಹಕ್ಕೆ ಸಾಕ್ಷಿಯಾಗಿದೆ.

 

Tags:
error: Content is protected !!