ಮಾಸ್ಕೋ: ರಷ್ಯಾದಲ್ಲಿ ಸಂಶೋಧಕಿಯೊಬ್ಬರು ತೀವ್ರ ನ್ಯುಮೋನಿಯಾದಿಂದ ಮೃತಪಟ್ಟಿರುವುದು ವರದಿಯಾಗಿದೆ.
ಅಕ್ಟೋಬರ್ 2ರಂದು ತೀವ್ರ ನ್ಯುಮೋನಿಯಾದಿಂದ ಸಂಶೋಧಕಿ ಮೃತಪಟ್ಟಿದ್ದಾರೆ.
ಈ ಸಾವಿಗೂ ಪ್ಲೇಗ್‌ಗೂ ಸಂಬಂಧವಿದೆ ಎಂಬ ವರದಿಗಳ ಬೆನ್ನಲ್ಲೇ WHO ಸ್ಪಷ್ಟನೆ ನೀಡಿದೆ.
ರಷ್ಯಾ ಆರೋಗ್ಯ ಅಧಿಕಾರಿಗಳಿಂದ WHOಗೆ ಯಾವುದೇ ಪ್ಲೇಗ್ ಪ್ರಕರಣ ವರದಿಯಾಗಿಲ್ಲ ಎಂದು ಮಾಹಿತಿ ಲಭ್ಯವಾಗಿದೆ.
ಹೀಗಾಗಿ ರಷ್ಯಾದಲ್ಲಿ ಪ್ಲೇಗ್ ಪತ್ತೆಯಾಗಿದೆ ಎಂಬ ವರದಿಗಳಿಗೆ WHO ಸ್ಪಷ್ಟನೆ ನೀಡಿದೆ.




