Mysore
24
overcast clouds

Social Media

ಗುರುವಾರ, 17 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ: ದಸರಾ ಬಂದಾಗ ಮಾತ್ರ ಮೈಸೂರಿಗೆ ಸಿಂಗಾರ

ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನೂ ಮಾಡುತ್ತಿದೆ. ದಸರಾ ಆನೆಗಳು ಅರಮನೆ ಆವರಣದಲ್ಲಿ ಬೀಡುಬಿಟ್ಟಿವೆ. ಮೈಸೂರಿನ ಪ್ರಮುಖ ರಸ್ತೆಗಳು, ವೃತ್ತಗಳಿಗೆ ದೀಪಾಲಂಕಾರ ಮಾಡಲಾಗುತ್ತಿದೆ. ದಸರಾ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳ ದುರಸ್ತಿ, ಕೆಲವು ಕಡೆ ಫುಟ್ ಪಾತ್‌ಗಳಿಗೆ ಹೊಸದಾಗಿ ಟೈಲ್ಸ್ ಅಳವಡಿಸಲಾಗುತ್ತಿದೆ. ಬಸ್ ತಂಗುದಾಣಗಳಿಗೆ ಬಣ್ಣ ಬಳಿದು ಸಿಂಗರಿಸಲಾಗುತ್ತಿದೆ. ಇವೆಲ್ಲವೂ ದಸರಾ ನಿಮಿತ್ತ ಮಾತ್ರ. ನಗರದ ಪ್ರಮುಖ ರಸ್ತೆಗಳು ಮತ್ತೆ ದುರಸ್ತಿಯಾಗುವುದು ಮುಂದಿನ ವರ್ಷ ದಸರಾ ಬಂದಾಗ ಮಾತ್ರ ಎಂಬುದು ಗಮನಾರ್ಹ ಸಂಗತಿ.

ಮೈಸೂರು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ವರ್ಷವಿಡೀ ಪ್ರವಾಸಿಗರು ಭೇಟಿ ನೀಡುತ್ತಾರೆ. ಜಿಲ್ಲಾ ಆಡಳಿತ ಹಾಗೂ ಸರ್ಕಾರ ನಗರಸ ರಸ್ತೆ , ಫುಟ್ ಪಾತ್ ಮೊದಲಾದ ಸ್ಥಳಗಳಲ್ಲಿ ಗುಣಮಟ್ಟದ ಕಾಮಗಾರಿ ನಡೆಸಿದರೆ ಪದೇ ಪದೇ ದುರಸ್ತಿ ಮಾಡುವುದು ತಪ್ಪುತ್ತದೆ.

ಸದ್ಯೋಜಾತ, ಮೈಸೂರು

 

Tags:
error: Content is protected !!