Mysore
25
overcast clouds

Social Media

ಗುರುವಾರ, 10 ಸೆಪ್ಟೆಂಬರ್ 2026
Light
Dark

ರಾಜ್ಯದಲ್ಲಿ ವಸತಿ ರಹಿತರಿಗೆ 5 ಲಕ್ಷ ನಿವೇಶನ : ಸಿಎಂ ಘೋಷಣೆ

ಬೆಂಗಳೂರು : ರಾಜ್ಯದಲ್ಲಿ 5 ಲಕ್ಷ ನಿವೇಶನ ಹಂಚಿಕೆಗೆ ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದ ಸರ್ಕಾರ ನೂರು ದಿನಗಳನ್ನು ಪೂರೈಸಿದಿ ಗುರುತಾಗಿ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಹಮಿಕೊಂಡಿದ್ದ

ದೃಢ ಕರ್ನಾಟಕದ ಸಂಕಲ್ಪ ಶತಕದ ಪಥ ಪ್ರಗತಿಯ ರಥ ಕಾರ್ಯಕ್ರಮದಲ್ಲಿ ಮಾತನಾಡಿದರು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹಾಗೂ ನಾನು ಇಂದು ತಮ್ಮ ಸಮುಖದಲ್ಲಿ ಸಹಿ ಹಾಕುವ ಮೂಲಕ 50 ಲಕ್ಷ ನಿವೇಶನ ಹಂಚಿಕೆಗೆ ತೀರ್ಮಾನ ಮಾಡಿದ್ದೇವೆ ಎಂದರು.

50 ಸಾವಿರ ಯುವಕರಿಗೆ ಸ್ವಂತ ಉದ್ಯೋಗ, ಅಲ್ಪಸಂಖ್ಯಾತ ಸಮುದಾಯಕ್ಕೆ ಕೌಶಲ್ಯ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಬರಗಾಲದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. 3 ಎಕರೆ ಒಳಗಿನ ರೈತರ ಜಮೀನನ್ನು ಉಳುವಂತಹ ನೇಗಿಲಯೋಗಿ ಹೊಸ ಕಾರ್ಯಕ್ರಮವನ್ನು ಜಾರಿಗೆ ತರುತ್ತೇವೆ. ಜಿಲ್ಲೆಗೆ ಎರಡು ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಈ ಕಾರ್ಯಕ್ರಮ ಅನುಷ್ಠಾನಕ್ಕೆ ತರಲಾಗುವುದು ಎಂದರು.

ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಹಳ್ಳಿ ಬದುಕಿನ ಪರಿಚಯ ಮಾಡಿಸಲು ಮೂರು ದಿನ ಗ್ರಾಮವಾಸ್ತವ್ಯ ಕಾರ್ಯಕ್ರಮ ಜಾರಿಗೆ ತರಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಸರ್ಕಾರಿ ರಸ್ತೆಯ ಬದಿಯಲ್ಲಿ ತೇಗದ ಮರ ಬೆಳೆಸುವ ತೇಗದ ಸಿರಿ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲಾಗುವುದು. ರಸ್ತೆಯ ಪಕ್ಕದಲ್ಲಿರುವ ರೈತರು ತೇಗದ ಮರಗಳನ್ನು ಬಳಸಬೇಕು. 25 ವರ್ಷದ ನಂತರ ತೇಗದ ಮರದಿಂದ ಬರುವ ಶೇ.70 ರಷ್ಟು ಹಣ ರೈತರಿಗೆ, ಶೇ.35 ರಷ್ಟು ಹಣ ಸರ್ಕಾರಕ್ಕೆ ದೊರೆಯಲಿದೆ ಎಂದು ಅವರು ಹೇಳಿದರು. ಪ್ರತೀ ಪಂಚಾಯಿತಿಗೊಂದರಂತೆ ರಾಜ್ಯದಲ್ಲಿ 10 ಸಾವಿರ ಭಾರತ್‌ ಜೋಡೋ ಸಂಘ ಸ್ಥಾಪನೆ ಮಾಡಲಾಗುವುದು. ಪ್ರತೀ ಸಂಘಕ್ಕೆ 10 ಲಕ್ಷ ರೂ. ನೀಡಲು ಒಂದು ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ನೋಂದಣಿ ಪ್ರಕ್ರಿಯೆ ಆನ್‌ಲೈನ್‌ ಮತ್ತು ಆಫ್‌ಲೈನ್‌ ಮೂಲಕ ಮಾಡಲಾಗುವುದು. ಹಿಂದುಳಿದ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು. ಉದ್ಯೋಗ ಸೇತು ಕಾರ್ಯಕ್ರಮವನ್ನು ಜಾರಿಗೆ ತರಲಾಗುವುದು.

ಒಂದು ಸಾವಿರ ಕರ್ನಾಟಕ ಪಬ್ಲಿಕ್‌ ಶಾಲೆಯನ್ನು ಆರಂಭಿಸಲಾಗುವುದು. ಗ್ರಾಮೀಣ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಶೇ. 7.5 ರಷ್ಟು ಮಿಸಲಾತಿ ಒದಗಿಸಲಾಗುವುದು ಎಂದರು. ಹೀಗೆ ಕರ್ನಾಟಕದಲ್ಲಿ ಪರಿವರ್ತನೆಯ ಪರ್ವ ಆರಂಭವಾಗುತ್ತಿದೆ. ಮೇಕೆದಾಟು ಯೋಜನೆ ಅನುಷ್ಠಾನ ಪ್ರಕ್ರಿಯೆಗಳು ಪ್ರಾರಂಭವಾಗಿವೆ. ಅನುಮತಿ ಸಿಕ್ಕ ಒಂದೇ ದಿನದಲ್ಲಿ ಭೂಮಿ ಪೂಜೆ ನೆರವೇರಿಸುವುದಾಗಿ ಅವರು ಪ್ರಕಟಿಸಿದರು.
ಕರ್ನಾಟಕದ ಮಾದರಿ ದೇಶದಲ್ಲೇ ಮಾದರಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಇಂದಿಗೂ ಗ್ಯಾರಂಟಿ ನಾಳೆಗೂ ಅಭಿವೃದ್ಧಿ. ಇದು ಕರ್ನಾಟಕದ ಸಂಕಲ್ಪ ಎಂದು ಹೇಳಿದರು.

Tags:
error: Content is protected !!