Mysore
26
overcast clouds

Social Media

ಭಾನುವಾರ, 16 ಆಗಸ್ಟ್ 2026
Light
Dark

ವಾರಣಾಸಿ ಏರ್‌ಫೋರ್ಟ್‌ | ಶಸ್ತ್ರಾಸ್ತ್ರ ತಪಾಸಣೆ ವೇಳೆ ಆಕಸ್ಮಿಕ ಗುಂಡಿನ ದಾಳಿ ; ಇಬ್ಬರಿಗೆ ಗಾಯ

ವಾರಣಾಸಿ : ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಶಸ್ತ್ರಾಸ್ತ್ರ ತಪಾಸಣೆಯ ವೇಳೆ ಏರ್ ಇಂಡಿಯಾ ಪ್ರಯಾಣಿಕನೊಬ್ಬನ ಬಳಿಯಿದ್ದ ಪಿಸ್ತೂಲ್‌ನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ಇಬ್ಬರು ವಿಮಾನ ನಿಲ್ದಾಣದ ಸಿಬ್ಬಂದಿ ಗಾಯಗೊಂಡಿದ್ದಾರೆ.

ಅಜಮ್‌ಘರ್ ಮೂಲದ ಪ್ರಯಾಣಿಕನೊಬ್ಬ ತನ್ನ ಪತ್ನಿಯೊಂದಿಗೆ ಮುಂಬೈಗೆ ತೆರಳಲು ಏರ್ ಇಂಡಿಯಾ ವಿಮಾನದಲ್ಲಿ (IX-1810) ಪ್ರಯಾಣಿಸಲು ಸಿದ್ಧತೆ ನಡೆಸಿದ್ದನು. ನಿಯಮಾನುಸಾರ ಆತ ತನ್ನ ಬಳಿ ಪಿಸ್ತೂಲ್ ಹಾಗೂ ಮ್ಯಾಗಜೀನ್ ಇರುವುದಾಗಿ ವಿಮಾನ ಹತ್ತುವ ಮುನ್ನ ಅಧಿಕಾರಿಗಳಿಗೆ ಘೋಷಿಸಿದ್ದನು.

ವಿಮಾನ ನಿಲ್ದಾಣದ ನಿರ್ದೇಶಕ ಪುನೀತ್ ಗುಪ್ತಾ ಅವರ ಮಾಹಿತಿ ಪ್ರಕಾರ, ವಿಮಾನ ನಿಲ್ದಾಣದ AAICLAS ಸ್ಕ್ರೀನರ್‌ಗಳು ಆಯುಧ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದ ವೇಳೆ ಈ ಅನಾಹುತ ಸಂಭವಿಸಿದೆ. ಪರಿಶೀಲನೆ ನಡೆಸುತ್ತಿದ್ದ ಸಂಧರ್ಭದಲ್ಲಿ ಬಂದೂಕಿನಿಂದ ಗುಂಡು ಹಾರಿದ್ದು, ಅದು ಮೊದಲು ನೆಲಕ್ಕೆ ತಗುಲಿ ಬಳಿಕ ಹತ್ತಿರದಲ್ಲಿದ್ದ ಇಬ್ಬರು ಸಿಬ್ಬಂದಿಗೆ ಬಿತ್ತು. ಘಟನೆಯಲ್ಲಿ ಒಬ್ಬ ಮಹಿಳಾ ಸಿಬ್ಬಂದಿಯ ತೊಡೆಗೆ ಹಾಗೂ ಮತ್ತೊಬ್ಬ ಪುರುಷ ಸಿಬ್ಬಂದಿಯ ಕೈಗೆ ಗುಂಡೇಟಿನ ಗಾಯಗಳಾಗಿವೆ. ತಕ್ಷಣವೇ ಎಚ್ಚೆತ್ತ ವಿಮಾನ ನಿಲ್ದಾಣದ ಆಡಳಿತ ಮಂಡಳಿಯು ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ನ್ಯೂ ಲಕ್ಷ್ಮಿ ಟ್ರಾಮಾ ಸೆಂಟರ್ (ಖಾಸಗಿ ಆಸ್ಪತ್ರೆ)ಗೆ ದಾಖಲಿಸಿತು. ಸದ್ಯ ಇಬ್ಬರ ಆರೋಗ್ಯ ಸ್ಥಿತಿಯೂ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

ಈ ಆಕಸ್ಮಿಕ ಘಟನೆಯ ಕುರಿತು ಸ್ಥಳೀಯ ಪೊಲೀಸರಿಗೆ ತಕ್ಷಣವೇ ಮಾಹಿತಿ ನೀಡಲಾಗಿದ್ದು, ವಿಮಾನ ನಿಲ್ದಾಣದ ಅಧಿಕಾರಿಗಳ ಸಮ್ಮುಖದಲ್ಲಿ ತನಿಖೆ ಮುಂದುವರಿದಿದೆ. ಶಸ್ತ್ರಾಸ್ತ್ರ ತಪಾಸಣೆ ಮತ್ತು ಭದ್ರತಾ ಪ್ರಕ್ರಿಯೆಗಳ ವೇಳೆ ಇಂತಹ ದುರ್ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲು ಹಾಗೂ ಹೆಚ್ಚಿನ ತನಿಖೆ ನಡೆಸಲು ನಿರ್ದೇಶನ ನೀಡಲಾಗಿದೆ. ಅಜಮ್‌ಗಢ ಮೂಲದ ಪ್ರಯಾಣಿಕನು ತನ್ನ ಪತ್ನಿಯೊಂದಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ IX-1810 ವಿಮಾನದಲ್ಲಿ ವಾರಣಾಸಿಯಿಂದ ಮುಂಬೈಗೆ ತೆರಳಲು ಬಂದಿದ್ದ. ಆತ ತನ್ನ ಬಳಿ ಪಿಸ್ತೂಲ್ ಮತ್ತು ಮ್ಯಾಗಜೀನ್ ಇರುವುದನ್ನು ಮುಂಚಿತವಾಗಿಯೇ ಘೋಷಿಸಿದ್ದ ಎನ್ನಲಾಗಿದೆ. ಶಸ್ತ್ರಾಸ್ತ್ರ ಹಾಗೂ ಸಂಬಂಧಿತ ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದ ಸಂದರ್ಭದಲ್ಲಿ ಗುಂಡು ಸಿಡಿದಿದೆ.

ಅಧಿಕಾರಿಗಳ ಪ್ರಕಾರ, ಗುಂಡು ಮೊದಲು ನೆಲಕ್ಕೆ ಬಡಿದು ಬಳಿಕ ಅದರ ಪರಿಣಾಮ ಇಬ್ಬರು ಸಮೀಪದಲ್ಲಿದ್ದ ಸಿಬ್ಬಂದಿಗೆ ತಾಗಿದೆ. ಮಹಿಳಾ ಸಿಬ್ಬಂದಿಯ ತೊಡೆಗೆ ಹಾಗೂ ಪುರುಷ ಸಿಬ್ಬಂದಿಯ ಕೈಗೆ ಗಾಯವಾಗಿದೆ. ಇಬ್ಬರನ್ನೂ ತಕ್ಷಣವೇ ನ್ಯೂ ಲಕ್ಷ್ಮಿ ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲಾಗಿದೆ. ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಘಟನೆಯ ಕುರಿತು ತನಿಖೆ ಆರಂಭವಾಗಿದೆ.

Tags:
error: Content is protected !!