Mysore
24
overcast clouds

Social Media

ಶನಿವಾರ, 17 ಅಕ್ಟೋಬರ್ 2026
Light
Dark

ಮಾಜಿ ಪ್ರಧಾನಿ ಎಚ್‌ಡಿಡಿ ಪತ್ನಿ ಚೆನ್ನಮ್ಮ ಆರೋಗ್ಯ ಸ್ಥಿರ: ವೈದ್ಯರ ಮಾಹಿತಿ

ಬೆಂಗಳೂರು: ದೇವೇಗೌಡರ ಪತ್ನಿ ಚೆನ್ನಮ್ಮ ಆರಾಮಾಗಿದ್ದಾರೆ ಎಂದು ಮಣಿಪಾಲ್‌ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಚೆನ್ನಮ್ಮ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚೆನ್ನಮ್ಮ ಆರೋಗ್ಯ ಕುರಿತು ಮಾಹಿತಿ ನೀಡಿರುವ ವೈದ್ಯರು, ಚೆನ್ನಮ್ಮ ಸದ್ಯ ಸುಧಾರಿಸಿಕೊಂಡಿದ್ದಾರೆ. ಎರಡು ದಿನದಲ್ಲಿ ಡಿಸ್ಚಾರ್ಜ್‌ ಮಾಡುವ ಪ್ಲಾನ್‌ ಇದೆ. ಸ್ವಲ್ಪ ಆಕ್ಸಿಜನ್‌ ಏರುಪೇರು ಇರುವುದರಿಂದ ಐಸಿಯುನಲ್ಲಿ ಅಡ್ಮಿಟ್‌ ಮಾಡಿದ್ದೇವೆ. ಅದರ ಹೊರತಾಗಿ ಯಾವುದೇ ಗಂಭೀರ ಪರಿಸ್ಥಿತಿ ಇಲ್ಲ ಎಂದು ಹೇಳಿದ್ದಾರೆ.

Tags:
error: Content is protected !!