Mysore
22
overcast clouds

Social Media

ಮಂಗಳವಾರ, 04 ಆಗಸ್ಟ್ 2026
Light
Dark

ಹನೂರು | ಪೊನ್ನಾಚಿ ಗ್ರಾಮದ ಬಳಿ ಬೋನಿಗೆ ಬಿದ್ದ ಚಿರತೆ

ಹನೂರು : ಅನೇಕ ದಿನಗಳಿಂದ ಸಾಕುಪ್ರಾಣಿಗಳನ್ನು ಕೊಂದು ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಗೆ ತಲೆ ನೋವಾಗಿದ್ದ ಚಿರತೆಯನ್ನು ಕೊನೆಗೂ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಕ್ಕೆಹೊಲ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಚಿರತೆ ಸೆರೆಯಾಗಿದೆ.

ಘಟನೆ ವಿವರ
ಕಳೆದ ಒಂದು ತಿಂಗಳಿನಿಂದಲೂ ಸಹ ಕಕ್ಕೆ ಹೊಲ ಗ್ರಾಮದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಆಗಿಂದಾಗೆ ಕಾಣಿಸಿಕೊಳ್ಳುತ್ತಿದ್ದು ಸಾಕು ಪ್ರಾಣಿಗಳನ್ನು ಕೊಂದು ತಿನ್ನುತ್ತಿತ್ತು. ಕಳೆದ ಎರಡು ದಿನಗಳ ಹಿಂದೆ ರಂಗಯ್ಯ ಎಂಬುವರ ಮನೆಗೆ ನುಗ್ಗಿ ಮೇಕೆಂದನ್ನು ಕೊಂದು ತಿಂದಿತ್ತು. ಇದರಿಂದ ಗ್ರಾಮಸರಲ್ಲಿ ಆತಂಕ ಮನೆ ಮಾಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆಯ ಚಲನ ವಲನ ಗಮನಿಸಿ, ಚಿರತೆ ಸರಿ ಹಿಡಿಯಲು ಬೊನ್ ಅಳವಡಿಸಿದ್ದರು. ಶುಕ್ರವಾರ ತಡರಾತ್ರಿ ಬೋನ್ಗೆ ಚಿರತೆ ಬಿದ್ದಿದ್ದು ಗ್ರಾಮಸ್ಥರು ನಿಟ್ಟಿಸಿರು ಬಿಟ್ಟಿದ್ದಾರೆ.

 

ಸೆರೆ ಸಿಕ್ಕ ಚಿರತೆ ಕತ್ತಿನಲ್ಲಿ ಬೆಲ್ಟ್ ಇದ್ದು ಈ ಹಿಂದೆ ಬೇರೆಡೆ ಸೆರೆ ಸಿಕ್ಕ ಚಿರತೆಯನ್ನು ಇಲಾಖೆಯ ಸಿಬ್ಬಂದಿಗಳು ನಮ್ಮ ಕಾಡಿನಲ್ಲಿ ತಂದು ಬಿಟ್ಟಿದ್ದಾರೆ ಎಂಬ ಆರೋಪವನ್ನು ಗ್ರಾಮಸ್ಥರು ಮಾಡಿದ್ದಾರೆ. ಒಟ್ಟಿನಲ್ಲಿ ಚಿರತೆಯನ್ನು ಸ್ಥಳೀಯವಾಗಿ ಬಿಡದೆ ಬೇರೆಡೆ ಸ್ಥಳಾoತರ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

Tags:
error: Content is protected !!