Mysore
28
overcast clouds

Social Media

ಶನಿವಾರ, 20 ಜೂನ್ 2026
Light
Dark

ಓದುಗರ ಪತ್ರ: ಮರಗಳ ಹನನ ಏಕೆ?

dgp murder case

ಮೈಸೂರಿನ ಕುಕ್ಕರಹಳ್ಳಿ ಕೆರೆ ಬಳಿ ಮೈಸೂರು ವಿಶ್ವವಿದ್ಯಾನಿಲಯದ ಹಿಂಭಾಗ ಮೈಸೂರು – ಚಾಮರಾಜನಗರ ರೈಲ್ವೆ ಹಳಿಯ ಪಕ್ಕದಲ್ಲಿದ್ದ ೩೫ ಮರಗಳನ್ನು ಕಡಿದು ಉರುಳಿಸುವುದು ನಾಚಿಕೆಗೇಡಿನ ಸಂಗತಿ. ಮಳೆ – ಗಾಳಿಯ ಸಂದರ್ಭದಲ್ಲಿ ವಿದ್ಯುತ್ ತಂತಿಯ ಮೇಲೆ ಮರದ ಕೊಂಬೆಗಳುಬೀಳುವ ಸಾಧ್ಯತೆ ಇರುವುದರಿಂದ ಆ ಮರಗಳನ್ನು ತೆರವು ಮಾಡಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಆದರೆ ವಾಸ್ತವ ಸ್ಥಿತಿ ಏನೆಂದರೆ ವಿದ್ಯುತ್ ತಂತಿಗೆ ತಗಲುವ ಮರದ ಕೊಂಬೆಗಳನ್ನು ಕಡಿದಿದ್ದರೆ ಸಾಕಾಗಿತ್ತು, ಹಲವಾರು ವರ್ಷಗಳಿಂದ ಬೆಳೆದಿದ್ದ ೩೫ ಮರಗಳನ್ನು ಸಂಪೂರ್ಣವಾಗಿ ಕಡಿದಿರುವುದು ಯಾವ ನ್ಯಾಯ? ಇತ್ತೀಚೆಗೆ ಮೈಸೂರಿನಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಬೆಳೆದು ನಿಂತಿರುವ ಮರಗಳ ಮೇಲೆ ವಕ್ರದೃಷ್ಟಿ ಬಿದ್ದಿರುವುದಂತೂ ನಿಜ.

ಇನ್ನು ಮುಂದಾದರೂ ಅಭಿವೃದ್ಧಿಯ ನೆಪದಲ್ಲಿ ನೂರಾರು ವರ್ಷಗಳಿಂದ ಬೆಳೆದು ನಿಂತಿರುವ ಮರಗಳನ್ನು ಧರೆಗೆ ಉರುಳಿಸದೆ ಅಧಿಕಾರಿಗಳು, ಜನಪ್ರತಿನಿಧಿಗಳು,ಪರಿಸರ ಪ್ರೇಮಿಗಳು ಒಟ್ಟಾಗಿ ಕುಳಿತು ಮಾತನಾಡಿ ಒಮ್ಮತದ ತೀರ್ಮಾನಕ್ಕೆ ಬಂದು ಮುಂದುವರಿಯುವುದು ಒಳ್ಳೆಯದು.

-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು

Tags:
error: Content is protected !!