Mysore
30
broken clouds

Social Media

ಗುರುವಾರ, 23 ಜುಲೈ 2026
Light
Dark

ಛತ್ತೀಸ್‌ಗಢದಲ್ಲಿ ಎಬೋಲಾ ಭೀತಿ: ಮೂವರು ಆಫ್ರಿಕಾ ಪ್ರಜೆಗಳಿಗೆ 21 ದಿನ ಕ್ವಾರಂಟೈನ್‌

ರಾಯ್ಪುರ: ಇತ್ತೀಚೆಗೆ ಆಫ್ರಿಕಾದ ಹಲವೆಡೆ ಎಬೋಲಾ ವೈರಸ್‌ ಭೀತಿ ಸೃಷ್ಟಿಯಾಗಿರುವ ಬೆನ್ನಲ್ಲೇ ಇದೀಗ ಛತ್ತೀಸ್‌ಗಢದಲ್ಲಿ ಮೂವರು ಆಫ್ರಿಕಾ ಪ್ರಜೆಗಳನ್ನು 21 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

ಈ ಬಗ್ಗೆ ರಾಜ್ಯ ಆರೋಗ್ಯ ಸಚಿವ ಶ್ಯಾಮ್‌ ಬಿಹಾರಿ ಜೈಸ್ವಾಲ್‌ ಮಾತನಾಡಿ, ಸದ್ಯ ಆಫ್ರಿಕಾದ ಮೂವರು ಪ್ರಜೆಗಳನ್ನು ದುರ್ಗ್‌ನಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿಗತಿಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಈವರೆಗೂ ಎಬೋಲಾ ವೈರಸ್‌ ಇರುವುದು ದೃಢಪಟ್ಟಿಲ್ಲ. ಯಾವುದೇ ರೀತಿಯ ರೋಗದ ಲಕ್ಷಣಗಳು ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ.

ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ವ್ಯಕ್ತಿಗಳ ಸಂಪರ್ಕದಲ್ಲಿದ್ದವರ ಮೇಲೂ ತೀವ್ರ ನಿಗಾ ವಹಿಸಲಾಗಿದ್ದು, ಎಲ್ಲರೂ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.

Tags:
error: Content is protected !!