Mysore
26
broken clouds

Social Media

ಮಂಗಳವಾರ, 01 ಸೆಪ್ಟೆಂಬರ್ 2026
Light
Dark

ಕಾಂಕ್ರೋಚ್‌ ಜನತಾ ಪಕ್ಷದ ಸಂಸ್ಥಾಪಕ ಜೂ.6ಕ್ಕೆ ಭಾರತಕ್ಕೆ ವಾಪಸ್‌

ನವದೆಹಲಿ: ಕಾಂಕ್ರೋಚ್‌ ಜನತಾ ಪಕ್ಷದ ಸಂಸ್ಥಾಪಕ ಅಭಿಜಿತ್‌ ದೀಪ್ಕೆ ಜೂನ್.‌6ರಂದು ಭಾರತಕ್ಕೆ ಮರಳಲಿದ್ದು, ದೆಹಲಿಯಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದಾರೆ.

ಹೊಸದಾಗಿ ಸ್ಥಾಪಿಸಲಾದ ಸಿಜೆಪಿ ಸ್ಥಾಪಕ ದೀಪ್ಕೆ ಜೂನ್.‌6ರಂದು ಭಾರತಕ್ಕೆ ಹಿಂತಿರುಗಿ, ಪರೀಕ್ಷೆಗೆ ಸಂಬಂಧಿಸಿದ ದೋಷಗಳಿಗಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಶಾಂತಿಯುವ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಬಿಡುಗಡೆ ಮಾಡಿದ ವೀಡಿಯೋದಲ್ಲಿ ದೀಪ್ಕೆ ದೆಹಲಿಯಲ್ಲಿ ನಡೆಯಲಿರುವ ತಮ್ಮ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಬೆಂಬಲಿಗರು ಮತ್ತು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ಜೂನ್.‌6ರಂದು ವಿಮಾನ ನಿಲ್ದಾಣದಲ್ಲಿ ತಮ್ಮೊಂದಿಗೆ ಸೇರುವಂತೆ ಬೆಂಬಲಿಗರಿಗೆ ತಿಳಿಸಿದ್ದಾರೆ.

Tags:
error: Content is protected !!