ಮೈಸೂರು: ಅಧಿಕಾರ ಬದಲಾವಣೆ ಎನ್ನುವುದು ಹೈಕಮಾಂಡ್ ನಿರ್ಧಾರ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಅಧಿಕಾರ ಬದಲಾವಣೆ ಎನ್ನುವುದು ಹೈಕಮಾಂಡ್ ನಿರ್ಧಾರ. ಈ ವಿಚಾರ ಹಾದಿ ರಂಪ ಬೀದಿ ರಂಪಾಟ ಆಗಬಾರದು ಎಂದು ಪಕ್ಷದ ವರಿಷ್ಠರು ನಿರ್ಧಾರ ಮಾಡಿದ್ದಾರೆ. ಹಿಂದಿನಿಂದಲೂ ಅದನ್ನೇ ನಾನು ಹೇಳಿಕೊಂಡು ಬಂದಿದ್ದೇನೆ. ಈಗ ಬದಲಾವಣೆಯಾಗುವ ಸಮಯ ಬಂದಿದೆ. ಯಾವುದೇ ಗೊಂದಲಗಳಿಲ್ಲದೆ ಸರಿಯಾಗುತ್ತದೆ ಎಂದುಕೊಂಡಿದ್ದೇನೆ. ನಮ್ಮ ಸರ್ಕಾರ 3 ವರ್ಷಗಳಿಂದ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಮುಂದೆಯು ಕೂಡ ಅದೇ ರೀತಿ ಜನಪರವಾಗಿ ಕೆಲಸ ಮಾಡಲಿದೆ ಎಂದು ಹೇಳಿದರು.
ಇನ್ನು ಸಿಎಂ ಬ್ರೇಕ್ ಫಾಸ್ಟ್ ಆಹ್ವಾನದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಎಲ್ಲಾ ಸಭೆಗಳಲ್ಲೂ ನಾವು ಇರಬೇಕು ಅಂತ ಏನು ಇಲ್ಲ. ಸಂಪುಟ ಸರ್ಜರಿ ಅಗುವುದಿಲ್ಲ. ಹೊಸ ಸಂಪುಟವೇ ಬರಲಿದೆ. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಈ ಹಿಂದೆ ಎಲ್ಲಾ 3 ಜನ ಅಲ್ಪಸಂಖ್ಯಾತ ಸಮುದಾಯದವರಿಗೆ ಸಚಿವ ಸ್ಥಾನಗಳನ್ನು ಕೊಟ್ಟಿದ್ದರು. ಆದರೆ, ಈ 3 ವರ್ಷದಲ್ಲಿ ಸಮುದಾಯದ ಇಬ್ಬರಿಗೆ ಮಾತ್ರ ಸಚಿವರಾಗುವ ಅವಕಾಶ ಸಿಕ್ಕಿತ್ತು. ಈಗ ಮೂರು ಸ್ಥಾನ ಕೊಡಬೇಕು ಅಂತ ಒತ್ತಾಯ ಮಾಡುತ್ತೇನೆ ಎಂದು ಹೇಳಿದರು.




