Mysore
33
scattered clouds

Social Media

ಗುರುವಾರ, 28 ಮೇ 2026
Light
Dark

ರಸಗೊಬ್ಬರ ಖರೀದಿಗೆ ಎಫ್ಐಡಿ ಕಡ್ಡಾಯ ವಿರೋಧಿಸಿ ಪ್ರತಿಭಟನೆ

ಮೈಸೂರು: ರಸಗೊಬ್ಬರ ಖರೀದಿಗೆ ಎಫ್‌ಐಡಿ ಕಡ್ಡಾಯ ಮಾಡಿರುವುದನ್ನು ವಿರೋಧಿಸಿ ರೈತ ಮುಖಂಡರು ಪ್ರತಿಭಟನೆ ನಡೆಸಿದರು.

ಮೈಸೂರಿನ ಕಾಡಾ ಕಛೇರಿ ಆವರಣದಲ್ಲಿರುವ ಜಂಟಿ ಕೃಷಿ ನಿರ್ದೇಶಕರ ಕಚೇರಿ ಮುಂದೆ ಜಮಾಯಿಸಿದ ರೈತರು ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬು ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡು ಕೂಡ ರೈತರನ್ನು ಕೃಷಿಯಿಂದ ಒಕ್ಕಲು ಎಬ್ಬಿಸುವ ಕೆಲಸ ಮಾಡುತ್ತಿವೆ.

ರೈತರ ಕೃಷಿ ಆದಾಯವನ್ನು 2026ಕ್ಕೆ ದ್ವಿಗುಣ ಗೊಳಿಸುತ್ತೇವೆ ಎಂದು ನರೇಂದ್ರ ಮೋದಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಕೃಷಿ ಆದಾಯ ದ್ವಿಗುಣಗೊಳ್ಳದೆ ಕೃಷಿಗೆ ಬಳಸುವ ರಸಗೊಬ್ಬರದ ಬೆಲೆ ಏರಿಕೆಯಾಗಿದೆ.

ರಾಜ್ಯದಲ್ಲಿ ಎರಡು ಕೋಟಿ ಟನ್‌ನಷ್ಟು ಯೂರಿಯಾ ರೈತರಿಗೆ ಬೇಕಾಗಿದೆ. ಆದರೆ 50% ರಸಗೊಬ್ಬರ ಇದೆ. ರೈತರಿಗೆ 50% ರಸ ಗೊಬ್ಬರದ ಕೊರತೆ ಆಗುವ ಸಾಧ್ಯತೆ ಇದೆ. ಎಫ್ ಐ ಡಿ ಇಲ್ಲದೆ ಬಗರು ಹುಕುಂ, ಗುತ್ತಿಗೆ ಮಾಡುವ ರೈತರ ಜಮೀನು, 10-15% ಪೌತಿ ಖಾತೆ ಆಗಿರುವುದಿಲ್ಲ. ಇವರಿಗೆ ರಸಗೊಬ್ಬರ ಕೊಡುವವರು ಯಾರು?. ರಾಜ್ಯ ಸರ್ಕಾರ ಪರ್ಯಾಯ ಮಾರ್ಗವನ್ನು ಕಂಡುಹಿಡಿದು ರೈತರಿಗೆ ರಸ ಗೊಬ್ಬರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

 

 

Tags:
error: Content is protected !!