Mysore
28
overcast clouds

Social Media

ಭಾನುವಾರ, 28 ಜೂನ್ 2026
Light
Dark

ಗೋಣಿಕೊಪ್ಪ | ಹುಲಿ ದಾಳಿಗೆ ಹಸು ಬಲಿ

ಗೋಣಿಕೊಪ್ಪ : ಇಲ್ಲಿಗೆ ಸಮೀಪದ ಬಿ.ಶೆಟ್ಟಿಗೇರಿಯಲ್ಲಿ ಇಂದು(ಮೇ.6) ಬೆಳಿಗ್ಗೆ ಹುಲಿ ದಾಳಿಗೆ ಹಸು ಬಲಿಯಾಗಿರುವ ಘಟನೆ ನಡೆದಿದೆ.

ಬಿ.ಶೆಟ್ಟಿಗೇರಿ ಗ್ರಾಮದ ನಿವಾಸಿಯಾದ ನಾಮೇರ ಜಯರವರಿಗೆ ಸೇರಿದ ಹಸುವನ್ನು ಹುಲಿ ದಾಳಿ ನಡೆಸಿ ಕೊಂದು ಹಾಕಿದೆ. ಒಂದೆಡೆ ಆನೆ ಮತ್ತೊಂದೆಡೆ ಹುಲಿ ದಾಳಿ ನಿರಂತರವಾಗಿ ಕೊಡಗಿನ ಜನತೆ ಮತ್ತು ಜಾನುವಾರುಗಳ ಮೇಲೆ ನಡೆಯುತ್ತಿದ್ದರು, ಆನೆ ಮಾನವ ಸಂಘರ್ಷ- ವನ್ಯಜೀವಿಗಳ ಉಪಟಳವನ್ನು ತಡೆಗಟ್ಟುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿಫಲವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:
error: Content is protected !!