Mysore
27
light rain

Social Media

ಮಂಗಳವಾರ, 04 ಆಗಸ್ಟ್ 2026
Light
Dark

ಅಜ್ಜೀಪುರ ಸಫಾರಿ ಕೇಂದ್ರದಲ್ಲಿ ಬಿಳಿ ಬಣ್ಣದ ಜಿಂಕೆ ದರ್ಶನ

ಹನೂರು : ಅಜ್ಜೀಪುರದ ಬಳಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಅಪರೂಪದ ಬಿಳಿ ಜಿಂಕೆ ದರ್ಶನ ನೀಡುವ ಮೂಲಕ ಅಚ್ಚರಿ ಮೂಡಿಸಿದೆ.

ಹನೂರು ಸಮೀಪದ ಮಲೆ ಮಾದೇಶ್ವರ ವನ್ಯಜೀವಿ ವಿಭಾಗದ ಹನೂರು ಬಫರ್ ಜೋನ್ ವಲಯದ ವ್ಯಾಪ್ತಿಯಲ್ಲಿ ಬರುವ ಸಫಾರಿಗೆ ತೆರಳಿದ್ದ ವೇಳೆಯಲ್ಲಿ ಬಿಳಿ ಜಿಂಕೆ ಕಂಡು ಪ್ರವಾಸಿಗರು ಪುಳಕಿತರಾಗಿದ್ದಾರೆ.

ಅಪರೂಪದ ಬಿಳಿ ಜಿಂಕೆ
ಹನೂರು ಅಜ್ಜೀಪುರ ಸಫಾರಿ ಕೇಂದ್ರದಲ್ಲಿ ಪ್ರವಾಸಿಗರಿಗೆ ಮೊದಲ ಬಾರಿಗೆ ಅಪರೂಪದ ಬಿಳಿ ಜಿಂಕೆ ಕಂಡಿರುವುದು ವಿಶೇಷವಾಗಿದೆ.

ಇತ್ತೀಚೆಗೆ ಪಿ ಜಿ ಪಾಳ್ಯ ಸಫಾರಿ ಕೇಂದ್ರದಲ್ಲಿ ಅಪರೂಪಕ್ಕೆ ಕರಿ ಚಿರತೆ ಮತ್ತು ಆನೆ,ಕಾಡೆಮ್ಮೆ ಹಾಗೂ ಹುಲಿ ಸೇರಿದಂತೆ ಇತರ ಪ್ರಾಣಿ ಪಕ್ಷಿಗಳು ಪ್ರವಾಸಿಗರಿಗೆ ಕಂಡುಬಂದಿರುವ ಜೊತೆಯಲ್ಲಿಯೇ ಹನೂರು ಬಫರ್ ಜೋನ್ ವಲಯದ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಅಪರೂಪದ ಬಿಳಿ ಜಿಂಕೆ ಕಂಡು ಬಂದಿದೆ. ಮಳೆ ಇಲ್ಲದೆ ಕಂಗಾಲಾಗಿರುವ ಕಾಡುಪ್ರಾಣಿಗಳಿಗೆ ಗುರುವಾರ ಸಂಜೆ ಮಳೆಯಾಗಿರುವ ಹಿನ್ನೆಲೆಯಲ್ಲಿ ಕಾಡುಪ್ರಾಣಿಗಳು ನೀರಿಗಾಗಿ ಪರದಾಟದ ನಡುವೆ ನಿಟ್ಟಿಸಿರು ಬಿಡುವಂತಾಗಿದೆ.

Tags:
error: Content is protected !!