Mysore
27
overcast clouds

Social Media

ಮಂಗಳವಾರ, 28 ಏಪ್ರಿಲ 2026
Light
Dark

ಮುಂದುವರೆದ ಕಾಡಾನೆ ಹಾವಳಿ : ಒಂಟಿ ಸಲಗ ದಾಳಿಗೆ ಓರ್ವ ಬಲಿ

ರಾಮನಗರ : ರಾಜ್ಯದಲ್ಲಿ ಮಾನವ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷ ಮುಂದುವರಿದಿದ್ದು, ಒಂಟಿ ಸಲಗ ದಾಳಿದ ಓರ್ವ ವ್ಯಕ್ತಿ ಬಲಿಯಾಗಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ‌ತಾಲೂಕಿನ ಚೀಲಂದವಾಡಿ ಗ್ರಾಮದಲ್ಲಿ ನಡೆದಿದೆ.

ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಕರಿಗುಂಡ(55) ಎಂಬವರು ಮೃತಪಟ್ಟಿದ್ದಾರೆ. ಸಂಗಮ ಅರಣ್ಯ ವಲಯ ಪ್ರದೇಶ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕರಿಗುಂಡ ಅವರ ಮೃತದೇಹವನ್ನು ಕನಕಪುರ ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮೆಕ್ಕೆಜೋಳ ಬೆಳೆ ನಾಶಪಡಿಸಿದ ಒಂಟಿ ಸಲಗ
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬರಗಿ ಕಾಲೋನಿಯ ನಾಗಪಟ್ಟಣ ಬಳಿ ಕಾಡಾನೆ ಹಾವಳಿಯಿಂದ ಮಹೇಶ್ ಎಂಬುವರಿಗೆ ಸೇರಿದ ಬೆಳೆ ಹಾನಿಯಾಗಿದೆ. ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್​ಗೆ ಅಂಟಿಕೊಂಡಂತಿರುವ ನಾಗಪಟ್ಟಣ ಗ್ರಾಮಕ್ಕೆ ಲಗ್ಗೆ ಇಟ್ಟ ಒಂಟಿ ಸಲಗ ಮೆಕ್ಕೆಜೋಳ ಬೆಳೆಯನ್ನ ಸಂಪೂರ್ಣ ನಾಶ ಮಾಡಿ ತೆರಳಿದೆ.

ಕೆರೆಯಲ್ಲಿ ಕಂಡ ಕಾಡಾನೆಗಳ ಹಿಂಡು
ಮತ್ತೊಂದೆಡೆ ಹನೂರು ತಾಲೂಕಿನ ಪಿಜಿ ಪಾಳ್ಯದಲ್ಲಿ ಮರಿಗಳ ಜೊತೆ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದೆ. ತನ್ನ ಮರಿಗಳ ಜೊತೆ ಕೆರೆಯ ನೀರಿಗಿಳಿದಿರುವ 10ಕ್ಕೂ ಹೆಚ್ಚು ಆನೆಗಳು, ಗಂಟಗಟ್ಟಲೆ ಕೆರೆಯಲ್ಲೆ ರಿಲ್ಯಾಕ್ಸ್ ಮಾಡಿರುವ ದೃಶ್ಯ ಕಂಡುಬಂದಿದೆ. ಬಿಸಿಲ ಧಗೆಗೆ ಕಾಡು ಪ್ರಾಣಿಗಳೂ ತತ್ತರಿಸುತ್ತಿದ್ದು, ಚಾಮರಾಜನಗರ ಜಿಲ್ಲೆಯಲ್ಲಿರುವ 36ರಿಂದ 37 ಡಿಗ್ರಿ ಸೆಲ್ಸಿಯಸ್​​​ನಷ್ಟು ತಾಪಮಾನದಿಂದ ರಕ್ಷಣೆ ಪಡೆಯಲು ನೀರಿನ ಮೂಲಗಳತ್ತ ಹೆಜ್ಜೆ ಹಾಕುತ್ತಿರೋದು ಕಂಡುಬಂದಿದೆ.

Tags:
error: Content is protected !!