Mysore
24
light rain

Social Media

ಸೋಮವಾರ, 04 ಮೇ 2026
Light
Dark

ಮಂತ್ರಾಲಯದಲ್ಲಿ 22 ದಿನದಲ್ಲಿ 3.25 ಕೋಟಿ ಕಾಣಿಕೆ ಸಂಗ್ರಹ

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಏಪ್ರಿಲ್‌ ತಿಂಗಳಿನ 22 ದಿನದ ಕಾಣಿಕೆ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 3.25 ಕೋಟಿ ರೂ ಸಂಗ್ರಹವಾಗಿದೆ.

ಬೇಸಿಗೆಯ ರಜೆಯ ಹಿನ್ನೆಲೆಯಲ್ಲಿ ರಾಯರ ಮಠಕ್ಕೆ ಭಕ್ತರ ದಂಡೇ ಹರಿದು ಬಂದಿದೆ. ಏಪ್ರಿಲ್‌ ತಿಂಗಳ ಮೊದಲ 22 ದಿನಗಳಲ್ಲೇ ಗುರುರಾಘವೇಂದ್ರ ಸ್ವಾಮಿ ಮಠಕ್ಕೆ ಕೋಟ್ಯಾಂತರ ರೂಪಾಯಿ ಕಾಣಿಕೆ ಹರಿದು ಬಂದಿದ್ದು, ಸಂಗ್ರಹವಾದ ಕಾಣಿಕೆಯಲ್ಲಿ 3,15,62,354 ರೂ ನೋಟುಗಳು, 10, 34, 500 ರೂ ನಾಣ್ಯಗಳು ಸಂಗ್ರಹವಾಗಿವೆ. ಜೊತೆಗೆ 47 ಗ್ರಾಂ ಚಿನ್ನ, 592 ಗ್ರಾಂ ಬೆಳ್ಳಿಯನ್ನು ಭಕ್ತರು ಕಾಣಿಕೆ ರೂಪದಲ್ಲಿ ನೀಡಿದ್ದಾರೆ.

 

 

Tags:
error: Content is protected !!