Mysore
36
few clouds

Social Media

ಗುರುವಾರ, 23 ಏಪ್ರಿಲ 2026
Light
Dark

ನಿಂತಿದ್ದ ವಿಮಾನಕ್ಕೆ ತಗುಲಿದ ಸ್ಪೈಸ್‌ಜೆಟ್‌ ವಿಮಾನ ; ತಪ್ಪಿದ ಭಾರಿ ಅನಾಹುತ

ನವದೆಹಲಿ : ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳ ನಡುವೆ ಸಣ್ಣ ಘರ್ಷಣೆಯಾಗಿದ್ದು, ಭಾರೀ ಅನಾಹುತ ತಪ್ಪಿದೆ.

ಗುರುವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದ್ದ ಆಕಾಸ ಏರ್ ವಿಮಾನಕ್ಕೆ ಸ್ಪೈಸ್ ಜೆಟ್ ವಿಮಾನ ತಗುಲಿದೆ. ಟ್ಯಾಕ್ಸಿವೇಯಲ್ಲಿ ಚಲಿಸುತ್ತಿದ್ದಾಗ ನಿಂತಿದ್ದ ಆಕಾಸ ಏರ್ ವಿಮಾನದ ರೆಕ್ಕೆಗೆ ಸ್ಪೈಸ್ ಜೆಟ್ ವಿಮಾನ ತಗುಲಿದೆ. ಪರಿಣಾಮ ಆಕಾಸ ಏರ್ ವಿಮಾನದ ಎಡ ಭಾಗದ ರೆಕ್ಕೆ, ಸ್ಪೈಸ್ ಜೆಟ್‌ನ ಬಲ ಭಾಗದ ರೆಕ್ಕೆಗೆ ಹಾನಿಯಾಗಿದೆ.

ತಾಗಿರುವ ಪ್ರಮಾಣ ಸಣ್ಣದಾಗಿತ್ತು, ಆದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ.

ಸ್ಪೈಸ್ ಜೆಟ್‌ಬಿ೭೩೭-೭೦೦ ವಿಮಾನವು ಏರ್‌ಪೋರ್ಟ್‌ನಲ್ಲಿ ಟ್ಯಾಕ್ಸಿ ವೇನಲ್ಲಿ ನಿಂತಿದ್ದಾಗ ನೆಲಕ್ಕೆ ಉರುಳಿತ್ತು. ಇದರ ಪರಿಣಾಮ ಅದರ ಬಲ ರೆಕ್ಕೆ ಆಕಾಸ ಏರ್‌ನ ವಿಮಾನಕ್ಕೆ ತಾಗಿ ಹಾನಿಯಾಗಿದೆ. ಇದೇ ವೇಳೆ ಆಕಾಸ ಏರ್‌ನ ಎಡ ರೆಕ್ಕೆ ಹಾನಿಯಾಗಿದ್ದು, ಸ್ಟೆಬಿಲೈಸರ್ ಕೂಡ ಹಾಳಾಗಿದೆ. ಹಾನಿಗೆ ಒಳಗಾದ ಆಕಾಸ ಏರ್ ವಿಮಾನವು (ಸಂಖ್ಯೆ ಕ್ಯೂಪಿ ೧೪೦೬) ದೆಹಲಿಯಿಂದ ಹೈದರಾಬಾದ್‌ಗೆ ಹಾರುತ್ತಿತ್ತು ಎಂದು ಆಕಾಸ ಏರ್ ತಿಳಿಸಿದೆ.

Tags:
error: Content is protected !!