Mysore
29
broken clouds

Social Media

ಗುರುವಾರ, 23 ಜುಲೈ 2026
Light
Dark

ಹೈಕಮಾಂಡ್‌ ಹೇಳಿದರೆ ಸಚಿವ ಸ್ಥಾನ ಬಿಡಲು ಸಿದ್ಧ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಹೈಕಮಾಂಡ್‌ ಹೇಳಿದರೆ ನಾನು ಸಚಿವ ಸ್ಥಾನ ಬಿಡಲು ಸಿದ್ಧನಿದ್ದೇನೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಹಿರಿಯ ಶಾಸಕರು ದೆಹಲಿಗೆ ಭೇಟಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಶಾಸಕರೆಲ್ಲಾ ಸಿಎಂ ಬದಲಾವಣೆಗಲ್ಲ ಸಚಿವ ಸ್ಥಾನಕ್ಕಾಗಿ ಹೋಗಿದ್ದಾರೆ. ಎರಡೂವರೆ ವರ್ಷದ ಬಳಿಕ ಸಂಪುಟ ಪುನಾರಚನೆ ಆಗುತ್ತದೆ ಎಂಬುದಿತ್ತು. ಹಾಗಾಗಿ ಹಿರಿಯ ಶಾಸಕರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ನಾನು ಹೈಕಮಾಂಡ್‌ ಹೇಳಿದರೆ ಖಂಡಿತ ಸಚಿವ ಸ್ಥಾನ ಬಿಡುತ್ತೇನೆ ಎಂದು ಹೇಳಿದರು.

 

Tags:
error: Content is protected !!