Mysore
22
overcast clouds

Social Media

ಬುಧವಾರ, 10 ಜೂನ್ 2026
Light
Dark

ಪೊನ್ನಂಪೇಟೆ: ಕಾಡಾನೆ ಕಂಡು ದ್ವಿಚಕ್ರ ವಾಹನದಿಂದ ಬಿದ್ದ ಸವಾರ

ಪೊನ್ನಂಪೇಟೆ: ರಸ್ತೆ ದಾಟುತ್ತಿದ್ದ ಕಾಡಾನೆಯನ್ನು ಕಂಡು ದ್ವಿಚಕ್ರ ವಾಹನ ಸವಾರರೊಬ್ಬರು ಕೆಳಗೆ ಬಿದ್ದು ಗಾಯಗೊಂಡ ಘಟನೆ ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಕಾಯಿಮಾನಿ ಬಳಿ ನಡೆದಿದೆ.

ಪೂಜೆಕಲ್ಲ್ ನಿವಾಸಿ ಆರ್ಮುಗಮ್(65) ಗಾಯಗೊಂಡ ಸವಾರರಾಗಿದ್ದಾರೆ. ಆರ್ಮುಗಮ್ ಅವರು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಸಂದರ್ಭ ಕಾಯಿಮಾನಿ ಕಾಫಿ ಮಿಲ್ ಸಮೀಪ ಕಾಡಾನೆಯೊಂದು ರಸ್ತೆ ದಾಟುತ್ತಿತ್ತು. ಇದನ್ನು ಕಂಡು ಆರ್ಮುಗಮ್ ಅವರು ಭಯಭೀತರಾಗಿದ್ದು, ದ್ವಿಚಕ್ರ ವಾಹನ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬಿದ್ದಿದ್ದು, ಸಣ್ಣಪುಟ್ಟ ಗಾಯಗಳಾಗಿದೆ.

 

Tags:
error: Content is protected !!