Mysore
24
scattered clouds

Social Media

ಗುರುವಾರ, 23 ಜುಲೈ 2026
Light
Dark

ಗಾಯಕಿ ಮಂಗ್ಲಿಯಿಂದ ೧೦ ಕೋಟಿ ವಂಚನೆ, ಕೊಲೆ ಬೆದರಿಕೆ ಆರೋಪ

ಬೆಂಗಳೂರು: ಗಾಯಕಿ ಮಂಗ್ಲಿ ಮತ್ತು ಅವರ ಸಹೋದರನ ವಿರುದ್ಧ ೧೦ ಕೋಟಿ ರೂ. ಮೋಸದ ಆರೋಪದಡಿ ಪಂಜಗುಟ್ಟ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕನ್ನಡ ಹಾಗೂ ತೆಲುಗಿನಲ್ಲಿ ಪ್ರಸಿದ್ಧಿ ಪಡೆದಿರುವ ಗಾಯಕಿ ಮಂಗ್ಲಿ ವಿರುದ್ಧ ಹೂಡಿಕೆ ಹಗರಣ ಹಾಗೂ ಬೆದರಿಕೆ ಆರೋಪ ಕೇಳಿಬಂದಿದೆ.

ತಮ್ಮನ್ನೂ ಸೇರಿದಂತೆ ಹಲವು ಹೂಡಿಕೆದಾರರಿಗೆ 10 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಅಡ್ವೋಕೇಟ್‌ ಸುಬ್ಬಾರಾವ್‌ ಎಂಬುವವರು ಮಂಗ್ಲಿ ಮತ್ತು ಇತರರ ವಿರುದ್ಧ ಆರೋಪ ಮಾಡಿದ್ದಾರೆ.

ವಂಚನೆಗೊಳಗಾದ ವಕೀಲ ಸುಬ್ಬರಾವ್ ಅವರ ಮೂಲಕ ಸಂಪರ್ಕಿಸಿದಾಗ, ಮಂಗ್ಲಿ ಮತ್ತು ಸಹೋದರ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

 

Tags:
error: Content is protected !!