Mysore
35
few clouds

Social Media

ಮಂಗಳವಾರ, 21 ಏಪ್ರಿಲ 2026
Light
Dark

ಗೆಲ್ಲಿಸಿಕೊಂಡು ಬರಲಿ ನೋಡೋಣ : ಸಿಎಂ ಸಿದ್ದರಾಮಯ್ಯಗೆ ಎಚ್‌ಡಿಕೆ ಸವಾಲು

ಮೈಸೂರು : ನಾನು ಅಹಿಂದ ಚಾಂಪಿಯನ್‌ ಎನ್ನುವ ಸಿದ್ದರಾಮಯ್ಯ, ಕಾಂಗ್ರೆಸ್‌ ಬಿಟ್ಟು ಹೊರ ಬಂದು 5-10 ಕ್ಷೇತ್ರಗಳಲ್ಲಿ ಅವರ ಅಭ್ಯರ್ಥಿಗಳನ್ನು ಗೆಲ್ಲಿಸಲಿ ನೋಡೋಣ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.

ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಕಂಡರೆ ಅಸೂಯೆ, ಹೊಟ್ಟೆಕಿಚ್ಚು ಇರುವುದು ನಮಗಲ್ಲ. ಕಾಂಗ್ರೆಸ್‌ನಲ್ಲೇ ಕೆಲವರಿಗೆ ಹೊಟ್ಟೆಕಿಚ್ಚಿದೆ ಎಂದರು.

ರಾಜಕೀಯವೇ ಸಾಕೆಂದು ಕಣ್ಣೀರು ಹಾಕಿದ್ದ ಸಿದ್ದರಾಮಯ್ಯ ಅವರನ್ನು ತಮ್ಮ ತಂದೆ ಎಚ್.ಡಿ. ದೇವೇಗೌಡರು ಸಮಾಧಾನಪಡಿಸಿದ್ದರು. 1999ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸೋತ ನಂತರ ಸಿದ್ದರಾಮಯ್ಯ ಅವರು ರಾಜಕೀಯವನ್ನೇ ಬಿಡುವುದಾಗಿ ಹೇಳಿ ನಮ್ಮ ಮನೆಗೆ ಬಂದು ಕಣ್ಣೀರು ಹಾಕಿದ್ದರು. ಆಗ ನಮ್ಮ ತಂದೆ ಅವರನ್ನು ಸಮಾಧಾನಪಡಿಸಿ, ರಾಜಕೀಯದಲ್ಲಿ ಮುಂದುವರಿಯುವಂತೆ ಆತ್ಮವಿಶ್ವಾಸ ನೀಡಿದ್ದರು” ಎಂದು ಹಿಂದಿನ ಘನಟೆಯನ್ನು ಹಂಚಿಕೊಂಡರು.

ಆಗ ದೇವೇಗೌಡರು ಸಿದ್ದರಾಮಯ್ಯ ಅವರಿಗೆ ಪರ್ಯಾಯ ವ್ಯವಸ್ಥೆಯನ್ನೂ ಮಾಡಿಕೊಟ್ಟಿದ್ದರು. ಆದರೆ ಈಗ ಅವರು ಇದನ್ನು ಸುಲಭವಾಗಿ ಮರೆತುಬಿಟ್ಟಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟು ಕೊಡುವುದಿಲ್ಲ. ಅವರ ಸ್ವಭಾವ ನನಗೆ ಗೊತ್ತಿದೆ. ಸಿಎಂ ಗಾದಿಗಾಯಿಯೇ ಒಬ್ಬರು ಹೆಚ್ಚಾಗಿ ದೇವರ ಮೊರೆ ಹೋಗುತ್ತಿದ್ದಾರೆ. ದೇವರಿಗೆ ಪ್ರಾರ್ಥನೆಯನ್ನು ಮನಪೂರ್ವಕವಾಗಿ ಮಾಡಬೇಕು ಸ್ವಾರ್ಥಕ್ಕೆ ಬೇಡಿಕೊಂಡರೆ ದೇವರು ಫಲ ಕೊಡುವುದಿಲ್ಲ ಎಂದು ವ್ಯಂಗ್ಯವಾಡಿದರು.

 

 

 

Tags:
error: Content is protected !!