Mysore
23
overcast clouds

Social Media

ಸೋಮವಾರ, 24 ಆಗಸ್ಟ್ 2026
Light
Dark

ಹನೂರು | ಕಾಡಾನೆದಾಳಿಗೆ 500ಕ್ಕೂ ಹೆಚ್ಚು ಬಾಳೆ ನಾಶ

ಹನೂರು : ಏಕ ಕಾಲದಲ್ಲಿ ಬುಧವಾರ ತಡರಾತ್ರಿ ಕಾಡಾನೆಗಳು ರೈತರ ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳ ಮೇಲೆ ದಾಳಿ ನಡೆಸಿ ಸುಮಾರು 500ಕ್ಕೂ ಹೆಚ್ಚು ಬಾಳೆಗಿಡಗಳನ್ನು ನಾಶ ಮಾಡಿರುವ ಘಟನೆ ಚಿಕ್ಕಮಾಲಾಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ತಾಲೂಕಿನ ಚಿಕ್ಕ ಮಾಲಾಪುರ ಗ್ರಾಮದ ನಾರಾಯಣ ಮೂರ್ತಿ, ಪ್ರತೀಶ್ ರಾಜು ನಂಜಯ್ಯ ಸೋಮಶೇಖರ್ ಹಾಗೂ ದಿವ್ಯ ಶ್ರೀ ಎಂಬುವವರ ಜಮೀನಿನಲ್ಲಿ ಬೆಳೆದಿದ್ದ ಬಾಳೆ, ಅಡಕೆ ತೆಂಗಿನ ಗಿಡಗಳು, ತಂತಿ ಬೇಲಿ ಕೃಷಿ ಪರಿಕರಗಳು ನಾಶವಾಗಿದೆ.

ಘಟನೆ ವಿವರ
ಗುರುವಾರ ಮುಂಜಾನೆ ಸರಿಸುಮಾರು 2:30 ಗಂಟೆ ವೇಳೆ ಬೇಲಿ ಮುರಿದು ಒಳ ನುಗ್ಗಿದ ಕಾಡಾನೆಗಳು ಸುಮಾರು ಬಾಳೆ ಗಿಡ ಸೇರಿದಂತೆ 30 ಅಡಿಕೆ, 30 ತೆಂಗು ಸಸಿಗಳನ್ನು ತುಳಿದಿದೆ. ಅಲ್ಲದೆ ಜಮೀನಿನ ಸುತ್ತಲೂ ಅಳವಡಿಸಿದ್ದ ತಂತಿ ಬೇಲಿಯನ್ನು ಮುರಿದು ಹೊರ ಹೋಗಿವೆ. ಸೋಲರ್ ಫೆನ್ಸಿಂಗ್ ಹಾಗೂ ಕೃಷಿ ಪರಿಕರಗಳು ಸಹ ಹಾಳಾಗಿದ್ದು ಅಂದಾಜು 2.ಲಕ್ಷ ರೂ ನಷ್ಟವಾಗಿದೆ ಎಂದು ತಿಳಿದು ಬಂದಿದೆ.

ಪರಿಹಾರ ನೀಡಿ
ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಮಹಜರು ನಡೆಸಿ ಬೆಳೆ ಪರಿಹಾರವನ್ನು ಹಾಗೂ ಹಾನಿಗೊಳಗಾದ ಪರಿಕಗಳಿಗೆ ಸೂಕ್ತ ಪರಿಹಾರವನ್ನು ನೀಡಬೇಕು, ಜೊತೆಗೆ ಮುಂದಿನ ದಿನಗಳಲ್ಲಿ ಕಾಡಾನೆ ಇತ್ತ ಬಾರದಂತೆ ತಡೆಗಟ್ಟಬೇಕು ಎಂದು ರೈತ ನಾರಾಯಣ ಮೂರ್ತಿ ಆಗ್ರಹ ಪಡಿಸಿದ್ದಾರೆ.

ಮುಂದಿನ ದಿನಗಳಲ್ಲಿ ಕಾಡು ಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕಲಾಗುವುದು. ರೈತರಿಂದ ದಾಖಲಾತಿ ಪಡೆದುಕೊಂಡು ಸೂಕ್ತ ಪರಿಹಾರ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಹನೂರು ಬಫರ್ ವಲಯದ ಪ್ರಭಾರ ವಲಯ ಅರಣ್ಯಾಧಿಕಾರಿ ಜಿತೇಂದ್ರ ಭರವಸೆ ನೀಡಿದ್ದಾರೆ.

Tags:
error: Content is protected !!