Mysore
22
broken clouds

Social Media

ಶುಕ್ರವಾರ, 18 ಸೆಪ್ಟೆಂಬರ್ 2026
Light
Dark

ಬಿಜೆಪಿಗೆ ಮರಳುವ ಚಿಂತನೆ ಮಾಡಿಲ್ಲ: ಎಸ್.ಟಿ.ಸೋಮಶೇಖರ್‌

ಬೆಂಗಳೂರು: ನಾನು ಬಿಜೆಪಿಗೆ ಮರಳುವ ಚಿಂತನೆ ಮಾಡಿಲ್ಲ. ಕಾಂಗ್ರೆಸ್‌ಗೆ ಹೋಗುತ್ತೇನೆ ಎಂದು ಶಾಸಕ ಎಸ್.ಟಿ.ಸೋಮಶೇಖರ್‌ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2028ರ ಚುನಾವಣೆ ವೇಳೆಗೆ ಎಲ್ಲಿಗೆ ಹೋಗಬೇಕು ಎಂದು ತೀರ್ಮಾನ ಮಾಡುತ್ತೇನೆ. ಬಿಜೆಪಿಗೆ ಮರಳುವ ಬಗ್ಗೆ ಬಿಎಸ್‌ವೈಗೆ ಕೇಳುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಇನ್ನು ನಾನು ಮನಸ್ಸು ಮಾಡಿದ್ರೆ ಉಚ್ಚಾಟನೆ ರದ್ದು ಮಾಡಿ ಮೂರು ದಿನದಲ್ಲಿ ಪಕ್ಷಕ್ಕೆ ವಾಪಸ್‌ ಬರಬಲ್ಲೆ ಎಂದು ಹೇಳಿದ್ದೆ. ಅದಕ್ಕೆ ರುದ್ರೇಶ್‌ ಮತ್ತೆ ಯಾಕೆ ಬರುತ್ತೀರಾ? ಬಿಎಸ್‌ವೈ, ಬಿ.ವೈ.ವಿಜಯೇಂದ್ರ ಬೂಟ್‌ ನೆಕ್ಕಲು ಬರುತ್ತೀರಾ ಎಂದು ಕೇಳ್ತಾನೆ. ನಮಗೆ ಸ್ವಾಭಿಮಾನ ಇಲ್ವಾ? ರುದ್ರೇಶ್‌ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಪತ್ರ ಕೊಟ್ಟಿದ್ದೇವೆ. ಮಾನನಷ್ಟ ಮೊಕದ್ದಮೆ ಹಾಕಲು ವಕೀಲರ ಜೊತೆಗೆ ಚರ್ಚಿಸಿದ್ದೇನೆ ಎಂದು ಹೇಳಿದರು.

 

Tags:
error: Content is protected !!