Mysore
26
clear sky

Social Media

ಮಂಗಳವಾರ, 18 ಆಗಸ್ಟ್ 2026
Light
Dark

ವಿಶ್ವ ಗುಬ್ಬಚ್ಚಿ ದಿನಾಚರಣೆ: ಮೈಸೂರಿನಲ್ಲಿ ಪಕ್ಷಿ ಸಂಕುಲ ರಕ್ಷಣೆಗೆ ಮುಂದಾದ ಮೈಸೂರಿಗರು

ಮೈಸೂರು: ವಿಶ್ವ ಗುಬ್ಬಚ್ಚಿ ದಿನಾಚರಣೆಯ ಹಿನ್ನೆಲೆಯಲ್ಲಿ ಇಂದು ಮೈಸೂರಿಗರು ಪಕ್ಷಿ ಸಂಕುಲ ರಕ್ಷಣೆಗೆ ಮುಂದಾಗಿದ್ದಾರೆ.

ಮೈಸೂರಿನ ಮಹಾರಾಜ ಮೈದಾನ ಮುಂಭಾಗದ ಮರದ ಕೊಂಬೆಗಳಿಗೆ ನೀರಿನ ಬೌಲ್‌ ಅಳವಡಿಕೆ ಮಾಡಲಾಗಿದ್ದು, ಬೇಸಿಗೆ ವೇಳೆ ಪಕ್ಷಿಗಳಿಗೆ ಕುಡಿಯುವ ನೀರು ಹಾಗೂ ಕಾಳಿನ ವ್ಯವಸ್ಥೆ ಮಾಡಲಾಗಿದೆ. ಪರಿಸರ ಸ್ನೇಹಿ ತಂಡ, ಕೆಎಂಪಿಕೆ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹತ್ತಾರು ಮಂದಿ ಭಾಗಿಯಾಗಿ ನೀರಿನ ಬೌಲ್‌ ಅಳವಡಿಕೆ ಮಾಡಿ ಪಕ್ಷಿ ಸಂಕುಲ ರಕ್ಷಣೆಗೆ ಪಣ ತೊಟ್ಟರು.

ಈ ಬಾರಿ ಬೇಸಿಗೆ ವೇಳೆ ಬಿಸಿಲು ಹೆಚ್ಚಾಗುವ ಸಾಧ್ಯತೆ ಇದೆ. ನಗರ ಪ್ರದೇಶಗಳಲ್ಲಿ ಪಕ್ಷಿಗಳಿಗೆ ಕುಡಿಯುವ ನೀರು, ಆಹಾರದ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಪಕ್ಷಿಗಳಿಗೆ ನೀರು ಆಹಾರ ನೀಡುವ ಕಾರ್ಯಕ್ರಮವನ್ನು ಪ್ರತಿ ವರ್ಷವೂ ಮಾಡುತ್ತಿದ್ದೇವೆ. ಮೈಸೂರಿಗರು ಕೂಡ ತಮ್ಮ ಮನೆಯ ಟೆರೇಸ್‌ಗಳಲ್ಲಿ ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿ. ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲವನ್ನು ರಕ್ಷಣೆ ಮಾಡುವ ಕೆಲಸ ಮಾಡಿ ಎಂದು ಕೆಎಂಪಿಕೆ ಟ್ರಸ್ಟ್ ನ ವಿಕ್ರಮ್ ಅಯ್ಯಂಗಾರ್ ಮನವಿ ಮಾಡಿದರು.

 

Tags:
error: Content is protected !!