Mysore
20
overcast clouds

Social Media

ಶುಕ್ರವಾರ, 21 ಆಗಸ್ಟ್ 2026
Light
Dark

ಮೈಸೂರು ನಗರದಲ್ಲಿ ಮಳೆ ; ತಂಪಾದ ಇಳೆ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿಲ್ಲಿ ಬುಧವಾರ ಸಂಜೆ ಏಕಾಏಕಿ ಮಳೆ ಸುರಿದು ಬಿರು ಬಿಸಿಲಿನಿಂದ ಬಳಲಿದ್ದ ನಗರವನ್ನು ಸ್ವಲ್ಪ ತಂಪಾಯಿಸಿತು. ನಗರದ ಹಲವೆಡೆ ಸುರಿದ ಮಳೆಯಿಂದ ನಿವಾಸಿಗಳಿಗೆ ಸ್ವಲ್ಪ ತಂಪು ಅನುಭವವಾಗಿದೆ.

 

ಸಂಜೆ 4 ಗಂಟೆ ವೇಳೆಗೆ ಶುರುವಾದ ಮಳೆ ಸುಮಾರು 1ಗಂಟೆಗೂ ಹೆಚ್ಚು ಸುರಿಯಿತು. ನಗರದ ಅಗ್ರಹಾರ, ಸಿಟಿ ಬಸ್‌ ನಿಲ್ದಾಣ, ರಾಮಸ್ವಾಮಿ ಸರ್ಕಲ್‌, ಸರಸ್ವತಿಪುರಂ, ಕುವೆಂಪುನಗರ, ವಿಜಯನಗರ, ಜಯಲಕ್ಷ್ಮಿಪುರಂ, ವಿದ್ಯಾರಣ್ಯಪುರಂ, ಜೆ.ಪಿ.ನಗರ, ಹೆಬ್ಬಾಳು, ಗೊಕುಲಂ, ಯುನಿವರ್ಸಿಟಿ ಲೇಔಟ್ ಸೇರಿದಂತೆ ಹಲವೆಡೆ ಮಳೆ ಸುರಿಯಿತು.

ಇನ್ನೂ ಮೂರು ನಾಲ್ಕು ದಿನಗಳು ಮೈಸೂರಿನ ಸುತ್ತಮುತ್ತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

 

Tags:
error: Content is protected !!