Mysore
23
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ಗುಂಡ್ಲುಪೇಟೆ | ವಿದ್ಯುತ್ ಸ್ಪರ್ಶಿಸಿ ಹುಲಿ ಸಾವು

ಗುಂಡ್ಲುಪೇಟೆ : ತಾಲೂಕಿನ ಪಡಗೂರು ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ಹುಲಿಯೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಗ್ರಾಮದ ಅಡವಿ ಮಠದ ಸಮೀಪವಿರುವ ಜಮೀನೊಂದರಲ್ಲಿ ಅಕ್ರಮವಾಗಿ ಬಿಟ್ಟಿದ್ದ ವಿದ್ಯುತ್ ತಂತಿಗೆ ಸಿಲುಕಿ ಹುಲಿ ಮೃತಪಟ್ಟಿದೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಅರಣ್ಯ, ಸೆಸ್ಕ್ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನೆಡಸುತ್ತಿದ್ದಾರೆ.

ಮೃತಪಟ್ಟ ಹುಲಿಯು ಅಂದಾಜು ಎರಡು ವರ್ಷದ ಗಂಡು ಹುಲಿಯಾಗಿದೆ. ಜಮೀನು ಕೇರಳ ಮೂಲದ ರವಿಚಂದ್ರ ಎಂಬುವವರಿಗೆ ಸೇರಿದ್ದು, ಪಟಗೂರು ಗ್ರಾಮದ ಪರಮೇಶ್ ಎಂಬುವವರು ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದರು.

ಗುಂಡ್ಲುಪೇಟೆ ಬಫರ್ ಜೋನ್ ವಲಯದ ಅಧಿಕಾರಿಗಳು ಥರ್ಮಲ್ ಡ್ರೋನ್ ಹಾರಿಸುತ್ತಿದ್ದಾಗ ವಿಚಾರ ಬೆಳಕಿಗೆ ಬಂದು ತಿಳಿದುಬಂದಿದೆ.

Tags:
error: Content is protected !!