Mysore
22
overcast clouds

Social Media

ಭಾನುವಾರ, 23 ಆಗಸ್ಟ್ 2026
Light
Dark

ಮೈಸೂರಿನ ಫುಟ್‌ಪಾತ್‌ನಲ್ಲಿ ಅವೈಜ್ಞಾನಿಕ ಟಾಂಗಾ ಸ್ಟ್ಯಾಂಡ್‌ ನಿರ್ಮಾಣ: ಪಾಲಿಕೆ ನಡೆಗೆ ಸಾರ್ವಜನಿಕರ ಆಕ್ರೋಶ

ಮೈಸೂರು: ನಿತ್ಯ ಸಾವಿರಾರು ಜನರು ಓಡಾಡುವ ಫುಟ್‌ಪಾತ್‌ನಲ್ಲಿ ಈಗ ಅವೈಜ್ಞಾನಿಕ ಟಾಂಗಾ ಸ್ಟ್ಯಾಂಡ್‌ ನಿರ್ಮಾಣ ಮಾಡಲು ಮುಂದಾಗುತ್ತಿದ್ದು, ಪಾಲಿಕೆ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅರಮನೆ ಮುಂಭಾಗದ ಚಾಮರಾಜೇಂದ್ರ ವೃತ್ತದ ಫುಟ್ ಪಾತ್ ಬಳಿ ಅವೈಜ್ಞಾನಿಕ ಟಾಂಗಾ ಸ್ಟ್ಯಾಂಡ್‌ ನಿರ್ಮಾಣ ಮಾಡಲಾಗುತ್ತಿದೆ. ಈ ರಸ್ತೆಯಲ್ಲಿ ನಿತ್ಯ ಸಾವಿರಾರು ಮಂದಿ ಓಡಾಟ ನಡೆಸುತ್ತಿದ್ದು, ಫುಟ್ ಪಾತ್ ಇಲ್ಲದ ಕಾರಣ ಪಾದಚಾರಿಗಳು ರಸ್ತೆಗಿಳಿಯುತ್ತಿರುವ ಪರಿಸ್ಥಿತಿ ಎದುರಾಗಿದೆ.

ಕೇಂದ್ರ ಸರ್ಕಾರದ ಸ್ವದೇಶ್ 2.0 ಯೋಜನೆಯಡಿ ಈಗಾಗಲೇ ಪಾಲಿಕೆಯು ಫುಟ್‌ಪಾತ್ ಬ್ಲಾಕ್ ಮಾಡಿ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದು, ನಗರದ ಹೃದಯ ಭಾಗದಲ್ಲಿರುವ ಸ್ಥಳದಲ್ಲಿ ಟಾಂಗಾ ಸ್ಟ್ಯಾಂಡ್‌ ನಿರ್ಮಾಣದ ಅವಶ್ಯಕತೆ ಇತ್ತ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ಯಾವುದೇ ಕಾರಣಕ್ಕೂ ಇಲ್ಲಿ ಟಾಂಗಾ ಸ್ಟ್ಯಾಂಡ್‌ ನಿರ್ಮಾಣ ಮಾಡಬಾರದು. ಪಾರಂಪರಿಕ ನಗರಿಗೆ ಇದು ಕಳಂಕ ವಿದ್ದಂತೆ. ಟಾಂಗ ಸ್ಟ್ಯಾಂಡ್‌ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ಆದರೆ ಈ ಸ್ಥಳ ಬಿಟ್ಟು ಬೇರೆಡೆ ನಿರ್ಮಾಣ ಮಾಡಲಿ ಎಂದು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

Tags:
error: Content is protected !!