Mysore
22
overcast clouds

Social Media

ಶನಿವಾರ, 01 ಆಗಸ್ಟ್ 2026
Light
Dark

ಮುಂದುವರಿದ ಇರಾನ್-ಇಸ್ರೇಲ್‌ ಸಂಘರ್ಷ: ವೈಮಾನಿಕ ದಾಳಿಗೆ ನಲುಗಿದ ಟೆಹರಾನ್‌ ಏರ್‌ಪೋರ್ಟ್‌

ಟೆಹರಾನ್:‌ ಇರಾನ್-ಇಸ್ರೇಲ್‌ ಸಂಘರ್ಷ ಮುಂದುವರಿದಿದ್ದು, ಇಸ್ರೇಲ್‌ ನಡೆಸಿದ ಹೊಸ ಅಲೆಯ ವೈಮಾನಿಕ ದಾಳಿಗೆ ಟೆಹರಾನ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಭೀಕರ ಸ್ಫೋಟಗಳು ಮತ್ತು ಬೆಂಕಿಯ ಜ್ವಾಲೆಗಳು ಆವರಿಸಿವೆ ಎಂದು ವರದಿಯಾಗಿದೆ.

ಇರಾನ್‌ನ ಸರ್ಕಾರಿ ಮಾಧ್ಯಮಗಳ ಪ್ರಕಾರ, ಟೆಹರಾನ್‌ ನಗರದ ಪ್ರಮುಖ ಅಂತರಾಷ್ಟ್ರೀಯ ಕೇಂದ್ರವಾದ ಮೆಹ್ರಾಬಾದ್‌ ವಿಮಾನ ನಿಲ್ದಾಣದ ಹೊರವಲಯವನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ.

ಸ್ಫೋಟದ ತೀವ್ರತೆಗೆ ನೆರೆಯ ಮನೆಗಳು ನಡುಗಿದ್ದು, ಇಡೀ ಟೆಹರಾನ್‌ ನಗರದಾದ್ಯಂತ ಭಾರೀ ಶಬ್ಧ ಕೇಳಿಬಂದಿದೆ.

 

 

Tags:
error: Content is protected !!