Mysore
33
few clouds

Social Media

ಭಾನುವಾರ, 08 ಮಾರ್ಚ್ 2026
Light
Dark

ಯುದ್ಧದ ನಡುವೆ ಇರಾನ್‌ನಲ್ಲಿ ಭೂಕಂಪ: 4.1 ತೀವ್ರತೆ ದಾಖಲು

ಟೆಹರಾನ್:‌ ಯುದ್ಧದ ನಡುವೆಯೇ ಇರಾನ್‌ನಲ್ಲಿ ಇಂದು ಭೂಕಂಪ ಸಂಭವಿಸಿದೆ.

ಇರಾನ್‌ನ ಆಯಕಟ್ಟಿನ ಪ್ರದೇಶದವಾದ ಬಂದರ್‌ ಅಬ್ಬಾಸ್‌ ಸಮೀಪ ರಿಕ್ಟರ್‌ ಮಾಪಕದಲ್ಲಿ 4.1 ತೀವ್ರತೆಯ ಭೂಕಂಪ ದಾಖಲಾಗಿದ್ದು, ಗಡಿ ಭಾಗದಲ್ಲಿ ಯುದ್ಧದ ಭೀತಿಯ ನಡುವೆಯೇ ನೈಸರ್ಗಿಕ ವಿಕೋಪ ಜನರಲ್ಲಿ ಭಾರೀ ಆತಂಕ ಮೂಡಿಸಿದೆ.

ಹೋರ್ಮೋಜ್ಗನ್‌ ಪ್ರಾಂತ್ಯದ ಬಂದರ್‌ ಅಬ್ಬಾಸ್‌ನಿಂದ ಸುಮಾರು 75 ಕಿಲೋಮೀಟರ್‌ ಪಶ್ಚಿಮಕ್ಕೆ ಈ ಭೂಕಂಪ ಸಂಭವಿಸಿದೆ.

ಭೂಕಂಪವು ಭೂಮಿಯ ಮೇಲ್ಮೈಯಿಂದ ಕೇವಲ 10 ಕಿಲೋ ಮೀಟರ್‌ ಆಳದಲ್ಲಿ ಉಂಟಾಗಿದ್ದು, ಇದರಿಂದಾಗಿ ಭೂಮಿ ಮೇಲ್ಭಾಗದಲ್ಲಿ ಕಂಪನದ ತೀವ್ರತೆ ಹೆಚ್ಚಾಗಿ ಕಂಡುಬಂದಿದೆ.

Tags:
error: Content is protected !!