Mysore
29
overcast clouds

Social Media

ಸೋಮವಾರ, 03 ಆಗಸ್ಟ್ 2026
Light
Dark

ಶ್ರೀರಂಗಪಟ್ಟಣ: ವೈಭವದಿಂದ ಜರುಗಿದ ಕರೀಘಟ್ಟ ವೆಂಕಟರಮಣಸ್ವಾಮಿ ಬ್ರಹ್ಮೋತ್ಸವ

ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಕರೀಘಟ್ಟ ವೆಂಕಟರಮಣ ಸ್ವಾಮಿಯ ಬ್ರಹ್ಮೋತ್ಸವ ಇಂದು ವೈಭವದಿಂದ ನಡೆಯಿತು. ಜಾತ್ರಾ ಮಹೋತ್ಸವಕ್ಕೆ ಸುತ್ತ ಮುತ್ತ ಇರುವ ಹಳ್ಳಿಗಳಿಂದ ಸಹಸ್ರಾರು ಭಕ್ತರು ಆಗಮಿಸಿ ‌ಸ್ವಾಮಿಯ ರಥೋತ್ಸವಕ್ಕೆ ಬಾಳೆ ಹಣ್ಣು ಜವನ ಎಸೆದು ಸ್ವಾಮಿಯ ಕೃಪೆಗೆ ಪಾತ್ರರಾದರು.

ಒಂಭತ್ತು ದಿನಗಳ ಕಾಲ ನಡೆಯುವ ಕರೀಘಟ್ಟ ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವ ಕಳೆದ ಫೆಬ್ರವರಿ.28ರಿಂದ ನಡೆಯುತ್ತಿದ್ದು, ಪ್ರತಿ ನಿತ್ಯ ನಿತ್ಯಾರಾಧನೆ, ಮಂಗಳ ಸ್ವಪನ ಮಹಾ ಮಂಗಳಾರತಿ, ಹಂಸವಾಹನ ನಡೆಯುತ್ತಿದೆ. ಅದೇ ರೀತಿ ಇಂದು ಆರನೇ ದಿನ ವೆಂಕಟರಮಣ ಸ್ವಾಮಿಯ ಬ್ರಹ್ಮೋತ್ಸವ ವೈಭವದಿಂದ ಜರುಗಿತು.

ಬಿಸಿಲಿನಲ್ಲಿ ಬ್ರಹ್ಮೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ಮಜ್ಜಿಗೆ, ಪಾನಕ ವಿತರಣೆ ಮಾಡಲಾಗಿದ್ದು, ಮಧ್ಯಾಹ್ನ ಪ್ರಸಾದವನ್ನು ಸಹ ನೀಡಲಾಯಿತು.

Tags:
error: Content is protected !!