Mysore
30
clear sky

Social Media

ಸೋಮವಾರ, 02 ಮಾರ್ಚ್ 2026
Light
Dark

ಇರಾನ್‌ ಕ್ಷಿಪಣಿ ಭೀತಿ: ದುಬೈನಲ್ಲಿ ಹೈಅಲರ್ಟ್‌ ಘೋಷಣೆ

ದುಬೈ: ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಯುದ್ಧದ ಉದ್ವಿಗ್ನತೆಯು ತಾರಕ್ಕೇರಿರುವುದರಿಂದ ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ದುಬೈನ್‌ ವಿಶ್ವಪ್ರಸಿದ್ಧ ಬುರ್ಜ್‌ ಖಲೀಫಾ ಕಟ್ಟಡವನ್ನು ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಖಾಲಿ ಮಾಡಿಸಿದ್ದಾರೆ.

ಗಲ್ಫ್‌ ಪ್ರದೇಶದಲ್ಲಿನ ಅಮೇರಿಕಾದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್‌ ಕ್ಷಿಪಣಿ ದಾಳಿ ನಡೆಸಿದ್ದರಿಂದ ದುಬೈ ನಗರದಾದ್ಯಂತ ಸ್ಫೋಟದ ಶಬ್ಧ ಕೇಳಿಬಂದಿದೆ.

ಇದರಿಂದಾಗಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಮುಖ್ಯವಾಗಿ ಕತಾರ್‌, ಕುವೈತ್‌, ಯುಎಇ ಮತ್ತು ಬಹ್ರೇನ್‌ನಲ್ಲಿರುವ ಅಮೇರಿಕಾದ ನೆಲೆಗಳ ಮೇಲೆ ಇರಾನ್‌ ಕ್ಷಿಪಣಿಗಳನ್ನು ಉಡಾಯಿಸಿರುವುದಾಗಿ ಘೋಷಣೆ ಮಾಡಿದೆ.

 

Tags:
error: Content is protected !!